ಸುದೀಪ್, ಪುನೀತ್, ಶಿವರಾಜ್ ಕುಮಾರ್ ಬಗ್ಗೆ ಬಂದ ಸುದ್ದಿ ಕನ್ ಫರ್ಮ್ ಆಯ್ತು!

ಭಾನುವಾರ, 15 ಆಗಸ್ಟ್ 2021 (11:48 IST)
ಬೆಂಗಳೂರು: ನಟ ಶಿವರಾಜ್ ಕುಮಾರ್ ಅಭಿನಯದ 124 ನೇ ಸಿನಿಮಾ ಮುಹೂರ್ತ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್,  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅತಿಥಿಗಳಾಗಲಿದ್ದಾರೆ ಎಂಬ ಸುದ್ದಿಯಿತ್ತು. ಅದೀಗ ಕನ್ ಫರ್ಮ್ ಆಗಿದೆ.


ಆಗಸ್ಟ್ 17 ರಂದು ನಗರದ ಪಂಚತಾರಾ ಹೋಟೆಲ್ ನಲ್ಲಿ ಮುಹೂರ್ತ ಕಾರ್ಯಕ್ರಮ ಬೆಳಿಗ್ಗೆ 7.45 ಕ್ಕೆ ನಿಗದಿಯಾಗಿದೆ. ಈ ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನೀತ್ ಹಾಗೂ ಸುದೀಪ್ ಅತಿಥಿಗಳಾಗಲಿದ್ದಾರೆ.

ರಾಮ್ ದುಲಿಪುಡಿ ಸಾರಥ್ಯದಲ್ಲಿ ಬರಲಿರುವ ಸಿನಮಾ ಬಗ್ಗೆ ಶಿವಣ್ಣ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿದೆ. ಇದರ ಟೈಟಲ್ ಕೂಡಾ ಇದೇ ದಿನ ಲಾಂಚ್ ಆಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ