ಬೆಂಗಳೂರು: ನಟಿ ಸುಧಾರಾಣಿ ತಮ್ಮ ಪುತ್ರಿ ನಿಧಿ ಸಿನಿ ರಂಗಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿಗಳ ಬಗ್ಗೆ ಕಲರ್ಸ್ ಕನ್ನಡ ಚ್ಯಾಟ್ ಶೋನಲ್ಲಿ ಸ್ಪಷ್ಟ ಉತ್ತರ ನೀಡಿದ್ದಾರೆ.
ಈ ಹಿಂದೆ ನಿಧಿ, ಜೋಗಿ ಪ್ರೇಮ್ ಅವರ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಾರೆ ಎಂದೆಲ್ಲಾ ಸುದ್ದಿಯಿತ್ತು. ಆದರೆ ಅದು ಸುಳ್ಳಾಗಿತ್ತು. ಈಗ ಸ್ವತಃ ಸುಧಾರಾಣಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನನ್ನ ಮಗಳು ಸಿನಿಮಾ ರಂಗಕ್ಕೆ ಬರುತ್ತಿಲ್ಲ. ಆಕೆಯ ಗಮನ ಓದುವುದರಲ್ಲಿದೆ. ಲಾ ಓದುತ್ತಿದ್ದಾಳೆ. ಅವಳಿಗೆ ಸಿನಿಮಾದಲ್ಲಿ ಇಂಟ್ರೆಸ್ಟೂ ಇಲ್ಲ. ಯಾವತ್ತೂ ಓದುತ್ತಲೇ ಇರ್ತಾಳೆ ಎಂದಿದ್ದಾರೆ. ಈ ಶೋನಲ್ಲಿ ನಿಧಿ ಕೂಡಾ ಪಾಲ್ಗೊಂಡಿದ್ದರು. ಈ ವೇಳೆ ಅವರೂ ಅಮ್ಮನ ಮಾತನ್ನು ಅನುಮೋದಿಸಿದ್ದಾರೆ. ನನಗೆ ಸಿನಿಮಾಗೆ ಬರುವ ಇಂಟ್ರೆಸ್ಟ್ ಇಲ್ಲ ಎಂದಿದ್ದಾರೆ.