ಅಭಿಷೇಕ್ ಗೆ ಸಿಕ್ಕ ಪ್ರತಿಕ್ರಿಯೆ ನೋಡಿ ಅಂಬಿ ನೆನೆದು ಭಾವುಕರಾದ ಸುಮಲತಾ ಅಂಬರೀಶ್

ಶನಿವಾರ, 1 ಜೂನ್ 2019 (08:58 IST)
ಬೆಂಗಳೂರು: ಜ್ಯೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಭಿನಯದ ಅಮರ್ ಸಿನಿಮಾ ನಿನ್ನೆ ತೆರೆಗೆ ಬಂದಿದ್ದು, ಮಗನ ಚೊಚ್ಚಲ ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆ ನೋಡಿ ಅಮ್ಮ ಸುಮಲತಾ ಅಂಬರೀಶ್ ಭಾವುಕರಾಗಿದ್ದಾರೆ.


ಬೆಂಗಳೂರಿನ ನರ್ತಕಿ ಥಿಯೇಟರ್ ನ ಜನಸಾಗರ ನೋಡಿ, ಇದು ಹಲವು ದಿಗ್ಗಜರನ್ನು ಹುಟ್ಟು ಹಾಕಿದ ಚಿತ್ರಮಂದಿರ. ಇದೇ ಚಿತ್ರ ಮಂದಿರದಲ್ಲಿ ಅಂಬರೀಶ್ ಅವರ 100 ನೇ ಚಿತ್ರ ಸೂಪರ್ ಹಿಟ್ ಪ್ರದರ್ಶನ ಕಂಡಿತ್ತು ಎಂದು ಸುಮಲತಾ ಹಳೆಯ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ. ಈ ನಡುವೆ ಮಗನ ಚಿತ್ರಕ್ಕೆ ಶುಭ ಹಾರೈಸಿದ ಮೆಚ್ಚಿ ಸಂದೇಶ ಬರೆದ ಎಲ್ಲರಿಗೂ ಸುಮಲತಾ ಧನ್ಯವಾದ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ