ಕುರುಕ್ಷೇತ್ರ ಫಸ್ಟ್ ಡೇ ಫಸ್ಟ್ ಶೋ ನೋಡಿದ ಜನ ಏನಂತಾರೆ ಗೊತ್ತಾ?

ಶುಕ್ರವಾರ, 9 ಆಗಸ್ಟ್ 2019 (10:16 IST)
ಬೆಂಗಳೂರು: ಬಹುನಿರೀಕ್ಷೆಯ ಕುರುಕ್ಷೇತ್ರ ಸಿನಿಮಾ ಬಿಡುಗಡೆಯಾಗಿದ್ದು, ಫಸ್ಟ್ ಡೇ ಫಸ್ಟ್ ಶೋ ನೋಡಿದ ಜನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.


ಮಧ್ಯರಾತ್ರಿ ಶೋ ನೋಡಿದ ಅಭಿಮಾನಿಗಳು 3 ಡಿಯಲ್ಲಿ ಡಿ ಬಾಸ್ ನೋಡುವುದೇ ಹಬ್ಬ ಎಂದಿದ್ದಾರೆ. ದುರ್ಯೋಧನನ ಎಂಟ್ರಿ, ದುರ್ಯೋಧನ ಮತ್ತು ಕರ್ಣನ ನಡುವಿನ ಫ್ರೆಂಡ್ ಶಿಪ್, ಕ್ಲೈಮ್ಯಾಕ್ಸ್ ನಲ್ಲಿ ಗದಾಯುದ್ಧದ ದೃಶ್ಯ  ಅದ್ಭುತವಾಗಿ ಬಂದಿದೆ ಎಂದು ವೀಕ್ಷಕರು ಕೊಂಡಾಡಿದ್ದಾರೆ.

ಇನ್ನು, ಕುರುಕ್ಷೇತ್ರದ ಕತೆಯನ್ನು ಸರಳವಾಗಿ ಅರ್ಥವಾಗುವಂತೆ ತೋರಿಸಲಾಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. 2 ವರ್ಷ ಕಾದಿದದ್ದಕೂ ಸಾರ್ಥಕವಾಯಿತು. ಡಿ ಬಾಸ್ 50 ನೇ ಸಿನಿಮಾ ಅದ್ಭುತ ದೃಶ್ಯ ಕಾವ್ಯ ಎಂದು ಪ್ರೇಕ್ಷಕರು ಅಭಿಪ್ರಾಯಪಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ