ನಿರಂಜನ್ ಸುಧೀಂದ್ರ ಚಿತ್ರದಲ್ಲಿ ಪ್ರಭುದೇವ ತಂದೆ ಸುಂದರ್ ಮಾಸ್ಟರ್

ಶುಕ್ರವಾರ, 13 ನವೆಂಬರ್ 2020 (09:31 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಸಂಬಂಧಿ ನಿರಂಜನ್ ಸುಧೀಂದ್ರ ಮೊದಲ ಬಾರಿಗೆ ಬೆಳ್ಳಿ ತೆರೆಗೆ ಕಾಲಿಡುತ್ತಿರುವ ಸಿನಿಮಾ ‘ಸೂಪರ್ ಸ್ಟಾರ್’. ಈ ಸಿನಿಮಾಗೆ ಈಗ ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ ತಂದೆ ಸುಂದರ್ ಮಾಸ್ಟರ್ ಆಗಮನವಾಗುತ್ತಿದೆ.


ಈ ಸಿನಿಮಾದಲ್ಲಿ ಸುಂದರ್ ಮಾಸ್ಟರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವುದು ಪಕ್ಕಾ ಆಗಿದೆ. ಕೊರಿಯಾಗ್ರಾಫರ್ ಆಗಿ ಖ್ಯಾತರಾಗಿರುವ ಸುಂದರ್ ಮಾಸ್ಟರ್ ಸ್ವತಃ ಪ್ರಭುದೇವ ಅವರ ರೋಲ್ ಮಾಡೆಲ್ ಕೂಡಾ ಹೌದು. ಈಗ ನಿರಂಜನ್ ಸಿನಿಮಾದಲ್ಲಿ ಬಣ್ಣ ಹಚ್ಚುವ ಮೂಲಕ ಯುವ ನಟನ ಸಿನಿಮಾಗೆ ಸ್ಟಾರ್ ಆಕರ್ಷಣೆ ನೀಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ