ಮನೆಯವರನ್ನು ವಿರೋಧಿಸಿ ಮದುವೆ ಆಗಿದ್ದ ಸ್ಯಾಂಡಲ್ ವುಡ್ ನಿರ್ಮಾಪಕನ ಪುತ್ರನ ಅದ್ಧೂರಿ ನಾಮಕರಣ
ಸೋಮವಾರ, 24 ಆಗಸ್ಟ್ 2020 (10:10 IST)
ಬೆಂಗಳೂರು: ನಿರ್ಮಾಪಕ ಸುಂದರ್ ಪಿ ಗೌಡ ಎಂಬ ಹೆಸರು ನಿಮಗೆ ನೆನಪಿರಬಹುದು. ಕೆಲವು ವರ್ಷಗಳ ಹಿಂದೆ ತಾನು ಪ್ರೀತಿಸಿದ ಹುಡುಗಿಯನ್ನು ಮನೆಯರ ವಿರೋಧ ಕಟ್ಟಿಕೊಂಡು ನಟ ದುನಿಯಾ ವಿಜಯ್ ಸಹಾಯದಿಂದ ಮದುವೆಯಾಗಿದ್ದರು. ಈಗ ಮತ್ತೆ ಅವರು ಸುದ್ದಿಯಾಗಿದ್ದಾರೆ.
ಸುಂದರ್ ಪಿ ಗೌಡ ಈಗ ತಮ್ಮ ಪತ್ನಿ ಜತೆ ಸುಂದರ ಕುಟುಂಬ ಕಟ್ಟಿಕೊಂಡಿದ್ದು, ಮುದ್ದಾಗ ಮಗನೂ ಇದ್ದಾನೆ. ಇದೀಗ ಗೌಡರು ಸುದ್ದಿಯಾಗಿದ್ದು ಅವರ ಮಗನ ನಾಮಕರಣದಿಂದಾಗಿ. ತಮ್ಮ ಪುತ್ರನ ನಾಮಕರಣಕ್ಕೆ ಭರ್ಜರಿ ವಿಡಿಯೋ ಹಾಡು ಮಾಡಿ ಲಾಂಚ್ ಮಾಡಿರುವ ಸುಂದರ್ ಆ ಮೂಲಕ ಸುದ್ದಿಯಾಗಿದ್ದಾರೆ. ಅಪ್ಪ-ಮಗನ ಬಾಂಧವ್ಯದ ಈ ಹಾಡು ಈಗ ಗಮನಸೆಳೆಯುವಂತಿದೆ.