ನಟಿ ಸುನೇತ್ರ ಪಂಡಿತ್ ಗೆ ಅಪಘಾತ

ಭಾನುವಾರ, 8 ಮೇ 2022 (09:20 IST)
ಬೆಂಗಳೂರು: ಕನ್ನಡ ಕಿರುತೆರೆ ನಟಿ ಸುನೇತ್ರ ಪಂಡಿತ್ ಗೆ ರಸ್ತೆ ಅಪಘಾತವಾಗಿದ್ದು ತಲೆಗೆ ಗಾಯವಾಗಿದೆ.

ಬಸವನಗುಡಿ ಬಳಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ರಸ್ತೆ ಗುಂಡಿ ತಪ್ಪಿಸಲು ಹೋಗಿ ಸುನೇತ್ರ ಕೆಳಕ್ಕೆ ಬಿದ್ದಿದ್ದಾರೆ. ಇದರಿಂದಾಗಿ ತಲೆಗೆ ಪೆಟ್ಟಾಗಿದೆ.

ತಕ್ಷಣವೇ ಅವರನ್ನು ಬಸವನಗುಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ