ವಂಚನೆ ಆರೋಪ: ಕಮಲಿ ಧಾರವಾಹಿ ನಿರ್ದೇಶಕರಾಗಿದ್ದ ಅರವಿಂದ್ ಕೌಶಿಕ್ ಬಂಧನ

ಶುಕ್ರವಾರ, 29 ಏಪ್ರಿಲ್ 2022 (10:19 IST)
ಬೆಂಗಳೂರು: ನಿರ್ಮಾಪಕರಿಗೆ ಹಣ ಹಿಂತಿರುಗಿಸದೇ ವಂಚಿಸಿದ್ದಾರೆ ಎಂಬ ಆರೋಪದಲ್ಲಿ ಕಮಲಿ ಧಾರವಾಹಿಯ ನಿರ್ದೇಶಕರಾಗಿದ್ದ ಅರವಿಂದ್ ಕೌಶಿಕ್ ರನ್ನು ಬಂಧಿಸಲಾಗಿದೆ.

ಕಮಲಿ ಧಾರವಾಹಿಗೆ ನಿರ್ದೇಶಕರಾಗಿದ್ದ ಅರವಿಂದ್ ಕೌಶಿಕ್ 2018 ರಲ್ಲಿ ರೋಹಿತ್ ಎಂಬವರಿಂದ ಕಮಲಿ ನಿರ್ಮಾಣಕ್ಕಾಗಿ 73 ಲಕ್ಷ ರೂ. ಪಡೆದಿದ್ದರು. ಆದರೆ ಈ ಹಣ ವಾಪಸ್ ಮಾಡದೇ ವಂಚಿಸಿದ್ದಾರೆ ಎಂಬುದು ಅವರ ಮೇಲಿನ ಆರೋಪವಾಗಿದೆ.

ಈ ಸಂಬಂಧ ರೋಹಿತ್ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಈಗ ವೈಯಾಲಿಕಾವಲ್ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ