ಸೀರಿಯಲ್ ಲೋಕ: ರಾಜನಂದಿನಿ ಸಾವಿನ ರಹಸ್ಯಕ್ಕೆ ಇಂದು ಉತ್ತರ

ಗುರುವಾರ, 5 ಮೇ 2022 (06:34 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ ಧಾರವಾಹಿ ಬಿಗ್ ಟ್ವಿಸ್ಟ್ ನಲ್ಲಿ ಬಂದು ನಿಂತಿದೆ.

ಇಂದು ರಾಜನಂದಿನಿ ಸಾವಿನ ರಹಸ್ಯ ಬಯಲಾಗಲಿದೆ. ಆರ್ಯವರ್ಧನ್ ನ ನಿಜವಾದ ಮುಖವಾಡ ಬಯಲಾಗಲಿದೆ. ಕಳೆದ ಕೆಲವು ಸಂಚಿಕೆಗಳಿಂದ ನಾಯಕ ಆರ್ಯವರ್ಧನ್ ರನ್ನು ವಿಲನ್ ರೀತಿ ಬಿಂಬಿಸಿ ನಿರ್ದೇಶಕರು ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದರು.

ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ರಾಜನಂದಿನಿ ಸಾವಿಗೆ ಆರ್ಯ ಕಾರಣರಲ್ಲ ಎಂಬುದು ಸ್ಪಷ್ಟವಾಗಲಿದೆ. ರಾಜನಂದಿನಿ ಪಾತ್ರದಲ್ಲಿ ಸ್ಯಾಂಡಲ್ ವುಡ್ ನಟಿ ಸೋನು ಗೌಡ ಅಭಿನಯಿಸಿದ್ದಾರೆ. ಇದು ಅವರ ಮೊದಲ ಧಾರವಾಹಿಯಾಗಿತ್ತು. ಅವರ ಪಾತ್ರ ಇದೀಗ ಅಂತ್ಯವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ