ಉಪ್ಪಿ ಕಬ್ಜದಲ್ಲಿ ಸನ್ನಿ ಲಿಯೋನ್?

ಗುರುವಾರ, 1 ಡಿಸೆಂಬರ್ 2022 (08:20 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜದಲ್ಲಿ ಮಾದಕ ತಾರೆ ಸನ್ನಿ ಲಿಯೋನ್ ಇರಲಿದ್ದಾರಾ?

ಹೀಗೊಂದು ಸುದ್ದಿ ಇದೀಗ ಹರಿದಾಡುತ್ತಿದೆ. ಬಹುಭಾಷೆಗಳಲ್ಲಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಸನ್ನಿ ಲಿಯೋನ್ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಆದರೆ ಈ ಬಗ್ಗೆ ಚಿತ್ರತಂಡದಿಂದ ಸ್ಪಷ್ಟನೆ ಬಂದಿಲ್ಲ. ಸನ್ನಿ ಲಿಯೋನ್ ಈಗಾಗಲೇ ಕನ್ನಡ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸನ್ನಿಗೆ ಅಭಿಮಾನಿಗಳ ದಂಡೇ ಇದೆ. ಇಲ್ಲಿನ ಜನರ ಬಗ್ಗೆ ಸನ್ನಿಗೂ ವಿಶೇಷ ಪ್ರೀತಿಯಿದೆ. ಹೀಗಾಗಿ ಕಬ್ಜ ಸಿನಿಮಾದಲ್ಲಿ ಅಭಿನಯಿಸಿದರೂ ಅಚ್ಚರಿಯಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ