ಹೈದರಾಬಾದ್: ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಮೂರನೇ ಪತ್ನಿ ಅನ್ನಾ ಲೆಜ್ನೆವಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ದಂಪತಿಗೆ ಈಗಾಗಲೇ ಒಂದು ಹೆಣ್ಣು ಮಗುವಿದೆ.
‘ತೀನ್ ಮಾರ್’ ಚಿತ್ರದ ಶೂಟಿಂಗ್ ವೇಳೆ ಪವನ್ ಲೆಜ್ನೆವಾ ನಡುವೆ ಪ್ರೀತಿ ಹುಟ್ಟಿತ್ತು. ಲೆಜ್ನೆವಾ ಮೂಲತಃ ರಷ್ಯಾದವರು. ಪವನ್ ತಮ್ಮ ದ್ವಿತೀಯ ಪತ್ನಿ ರೇಣು ದೇಸಾಯಿಯಿಂದ ವಿಚ್ಛೇದನ ಪಡೆದ ಬಳಿಕ ಲೆಜ್ನೆವಾ ಕೈ ಹಿಡಿದ್ದರು.
ರೇಣು ಮತ್ತು ಪವನ್ ದಾಂಪತ್ಯದಿಂದ ಎರಡು ಮಕ್ಕಳಿವೆ. ಇದರೊಂದಿಗೆ ಪವನ್ ನಾಲ್ಕು ಮಕ್ಕಳ ತಂದೆಯಾಗಿದ್ದಾರೆ. ಸದ್ಯಕ್ಕೆ ಪವನ್ ‘ಅಗ್ನಾತವಾಸಿ’ ಚಿತ್ರದ ಚಿತ್ರೀಕರಣದಲ್ಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ