ಸೂಪರ್ ಸ್ಟಾರ್ ರಜನೀಕಾಂತ್ ಬಿಜೆಪಿ ಸೇರ್ತಾರಾ?!

ಬುಧವಾರ, 22 ಮಾರ್ಚ್ 2017 (09:23 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ರಾಜಕೀಯ ಸೇರ್ಪಡೆ ಬಗ್ಗೆ ಹಲವು ದಿನಗಳಿಂದ ಉಹಾಪೋಹಗಳಿವೆ. ಇದೀಗ ರಜನಿ ಆರ್ ಕೆ ನಗರ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಯನ್ನು ಭೇಟಿ ಮಾಡಿದ್ದು, ಊಹಾಪೂಹಗಳಿಗೆ ರೆಕ್ಕೆ ಮೂಡಿಸಿವೆ.

 

ಜಯಲಲಿತಾರಿಂದ ತೆರವಾದ ಆರ್ ಕೆ ನಗರ ಕ್ಷೇತ್ರಕ್ಕೆ ಏಪ್ರಿಲ್ ನಲ್ಲಿ ಉಪಚುನಾವಣೆ ನಡೆಯಲಿದೆ. ಇದಕ್ಕಾಗಿ ರಾಜಕೀಯ ಪಕ್ಷಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಇದರ ನಡುವೆ ಅಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಗಂಗೈ ಅಮ್ರಾನ್ ರಜನೀಕಾಂತ್ ರನ್ನು ಭೇಟಿಯಾಗಿರುವುದು ಗಾಸಿಪ್ ಗೆ ಎಡೆ ಮಾಡಿಕೊಟ್ಟಿದೆ.

 
ಸಂಗೀತ ನಿರ್ದೇಶಕ ಇಳಯರಾಜ ಅವರ ಸಹೋದರನೂ ಆಗಿರುವ ಗಂಗೈ ರಜನೀಕಾಂತ್ ರನ್ನು ಭೇಟಿಯಾಗಿದ್ದು ಸೌಹಾರ್ದಯುತವಾಗಿ ಎನ್ನಲಾಗಿದೆ. ರಜನೀಕಾಂತ್ ಬಿಜೆಪಿ ಅಭ್ಯರ್ಥಿಗೆ ಶುಭಕೋರಿರುವುದರಿಂದ ಅವರ  ಅಭಿಮಾನಿಗಳ ಓಟು ಬಿಜೆಪಿಗೆ ಬೀಳಲಿದೆ ಎಂಬ ಲೆಕ್ಕಾಚಾರ ಹಾಕಲಾಗಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ