ಬಿಡುಗಡೆ ದಿನವೇ ಸಿಂಗಂ 3 ಸಿನಿಮಾ ಲೀಕ್!

ಶನಿವಾರ, 11 ಫೆಬ್ರವರಿ 2017 (09:02 IST)
ತಮಿಳು ನಟ ಸೂರ್ಯ, ಅನುಷ್ಕಾ ಜತೆಯಾಗಿ ಅಭಿನಯಿಸಿರುವ ಸಿಗಂ 3 ಚಿತ್ರ ಬಿಡುಗಡೆಯಾದ ದಿನವೇ ಅಂತರ್ಜಾಲದಲ್ಲಿ ಲೀಕ್ ಆಗಿದೆ. ವಿಶ್ವದಾದ್ಯಂತ ಶುಕ್ರವಾರ ಪ್ರೇಕ್ಷಕರ ಮುಂದೆ ಬಂದ ಈ ಸಿನಿಮಾದ ಸ್ವಲ್ಪ ಭಾಗವನ್ನು ಆನ್‍ಲೈನ್‍ನಲ್ಲಿ ನೇರ ಪ್ರಸಾರ ಮಾಡಲಾಗಿದೆ.
 
ಪೈರಸಿ ಗ್ರೂಪ್‌ಗಳು ಸಿನಿಮಾ ಲೀಕ್ ಮಾಡುತ್ತೀವಿ ಎಂದು ಈ ಹಿಂದೆಯೇ ಬೆದರಿಕೆ ಒಡ್ಡಿದ್ದವು. ಆದರೂ ಚಿತ್ರತಂಡ ಕ್ರಮಕೈಗೊಳ್ಳಲು ಸಾಧ್ಯವಾಗಿಲ್ಲ. ತಮಿಳು ಸಿಗಂ 3 ಚಿತ್ರವನ್ನು ಬಿಡುಗಡೆ ದಿನವೇ ಲೀಕ್ ಮಾಡುತ್ತೀವಿ ಎಂದು ತಮಿಳು ರಾಕರ್ಸ್ ಎಂಬ ಪೈರಸಿ ತಂಡ ಬೆದರಿಕೆ ಹಾಕಿತ್ತು. 
 
ಇದನ್ನು ಉದ್ದೇಶಿಸಿ ಚಿತ್ರದ ನಿರ್ಮಾಪಕ ಜ್ಞಾನವೇಲ್ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. ಈ ಹೇಳಿಕೆಗೆ ತಮಿಳು ರಾಕರ್ಸ್ ಪ್ರತಿಕ್ರಿಯಿಸುತ್ತಾ...ತಾವೇನೆಂದು ತೋರಿಸುತ್ತೇವೆ ಎಂದು ಫೇಸ್‍ಬುಕ್‌ನಲ್ಲಿ ಉತ್ತರಿಸಿದ್ದರು. ಅಂದುಕೊಂಡಂತೆ ಅವರು ಕೆಲಸ ಮಾಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ