ರಾಜಮೌಳಿ RRR ಸಿನಿಮಾದಲ್ಲಿ ಸೂರ್ಯ-ಕಾರ್ತಿ; ಅಭಿಮಾನಿಗಳ ಪೋಸ್ಟರ್ ಟ್ರೆಂಡಿಂಗ್

ಮಂಗಳವಾರ, 27 ಅಕ್ಟೋಬರ್ 2020 (10:38 IST)
ಚೆನ್ನೈ : ರಾಜಮೌಳಿ ಭಾರತೀಯ ಚಿತ್ರರಂಗದ ಹೆಚ್ಚು ಮೆಚ್ಚುಗೆ ಪಡೆದ ನಿರ್ದೇಶಕರಲ್ಲಿ ಒಬ್ಬರು. ಅವರು ಭಾಗಮತಿ ಚಿತ್ರದ ಮೂಲಕ ವಿಶ್ವದಾದ್ಯಂತ ಪ್ರಸಿದ್ಧರಾದರು.

ಪ್ರಸ್ತುತ ರಾಜಮೌಳಿ ಅವರು ಜೂನಿಯರ್ ಎನ್ ಟಿಆರ್ ಹಾಗೂ ರಾಮ್ ಚರಣ್ ಅವರೊಂದಿಗೆ RRR ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಎರಡು ಟೀಸರ್ ಬಿಡುಗಡೆಯಾಗಿದ್ದು, ಭಾರತದಲ್ಲಿ ಟ್ರೆಂಡ್ ಆಗಿದೆ. ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ಈ ಚಿತ್ರದ ಪೋಸ್ಟರ್ ಗೆ  ತಮಿಳಿನ ಖ್ಯಾತ ನಟರಿಬ್ಬರ ಪೋಟೊವನ್ನು ಹಾಕಿ ಪೋಸ್ಟ್ ಮಾಡಿದ್ದಾರೆ.

ಹೌದು ತಮಿಳಿನ ಖ್ಯಾತ ನಟರಾದ ಸೂರ್ಯ ಹಾಗೂ ಕಾರ್ತಿ ಅವರ ಫೋಟೊವನ್ನು  ಆಮ್ ರಾಮ ರಾಜು ಮತ್ತು ಭೀಮ್ ಪಾತ್ರದಲ್ಲಿ ಪೋಸ್ಟರ್ ಮಾಡಿದ್ದಾರೆ. ಈ ಪೋಸ್ಟರ್ ಇದೀಗ ಟ್ರೆಂಡಿಂಗ್ ಆಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ