ಸೂರ್ಯರ ಅಭಿಮಾನಿಗಳಿಗೊಂದು ಸಿಹಿ ಸುದ್ದಿ ; ನಟನ ಮುಂದಿನ ಚಿತ್ರ ಘೋಷಣೆ

ಮಂಗಳವಾರ, 27 ಅಕ್ಟೋಬರ್ 2020 (09:58 IST)
ಚೆನ್ನೈ : ಸೂರ್ಯ ಅವರ ಅಭಿಮಾನಿಗಳಿಗೊಂದು ಸಂತಸದ ಸುದ್ದಿ. ನಟ ಸೂರ್ಯ ಅವರ  ಮುಂದಿನ ಚಿತ್ರದ ಬಗ್ಗೆ ನಿರ್ಮಾಪಕರು ಘೋಷಣೆ ಮಾಡಿದ್ದಾರೆ. ಇದರ  ಕುರಿತಾದ ಮಾಹಿತಿ ಇಲ್ಲಿದೆ.

ನಟ ಸೂರ್ಯ ಅಭಿನಯದ ‘ಸೂರರೈ ಪೊಟ್ರು’ ಸಿನಿಮಾ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ. ಈ ಚಿತ್ರದ ಟೈಲರ್ ಈಗಾಗಲೇ ಬಿಡುಗಡೆಯಾಗಿದೆ. ಹೀಗಾಗಿ ಅಭಿಮಾನಿಗಳೆಲ್ಲರೂ ಸಂಭ್ರಮಿಸುತ್ತಿದ್ದಾರೆ.

ಈ ನಡುವೆ ಇದೀಗ ನಟ ಸೂರ್ಯ ಅವರ ಮುಂದಿನ ಚಿತ್ರ ಘೋಷಣೆಯಾಗಿದೆ. ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸುತ್ತಿದ್ದು, ಪಂಡಿರಾಜ್ ನಿರ್ದೇಶಿಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ