ರಿಯಾ ಚಕ್ರವರ್ತಿ ವಿರುದ್ಧ ಕೇಸ್ ಹಾಕಿದ ಸುಶಾಂತ್ ಸಿಂಗ್ ರಜಪೂತ್ ತಂದೆ

ಬುಧವಾರ, 29 ಜುಲೈ 2020 (20:12 IST)
ಬಾಲಿವುಡ್ ನಟ ಸುಶಾಂತ್ ಸಿಂಗ್  ರಜಪೂತ್‌  ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ.

ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ಕೆ.ಕೆ.ಸಿಂಗ್ ಅವರು ರಿಯಾ ಚಕ್ರವರ್ತಿ ವಿರುದ್ಧ ರಾಜೀವ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.  

ರಿಯಾ, ಸುಶಾಂತ್‌ನನ್ನು ತಮ್ಮ ಕುಟುಂಬದಿಂದ ದೂರವಿಟ್ಟಿದ್ದಳು. ಆತ ಸಂಪೂರ್ಣವಾಗಿ ಅವಳ ವಶದಲ್ಲಿದ್ದನು. ಅವಳು ಅವನ ಬ್ಯಾಂಕ್ ಖಾತೆಯನ್ನು ನಿರ್ವಹಿಸುತ್ತಿದ್ದಳು ಎಂದು ರಿಯಾ ಚಕ್ರವರ್ತಿ ಮತ್ತು ಆಕೆಯ ಕುಟುಂಬದ ವಿರುದ್ಧ ದೂರು ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ