ಬಿಗ್ ಬಾಸ್ ರಿಯಾಲಿಟಿ ಶೂ ವಿರುದ್ಧ ಗಂಭೀರ ಆರೋಪ ಮಾಡಿದ ನಟಿ ಒವಿಯಾ

ಬುಧವಾರ, 29 ಜುಲೈ 2020 (12:16 IST)
ಚೆನ್ನೈ : ಕನ್ನಡದಲ್ಲಿ ನಟ ಯಶ ಜೊತೆ ಕಿರಾತಕ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ನಟಿ ಒವಿಯಾ ಬಿಗ್ ಬಾಸ್ ರಿಯಾಲಿಟಿ ಶೂ ವಿರುದ್ಧ ಕಿಡಿಕಾರಿದ್ದಾರೆ.

ನಟಿ ಒವಿಯಾ ಈ ಹಿಂದೆ ಬಿಗ್ ಬಾಸ್ ನಲ್ಲಿ ಸ್ಪರ್ಧಾಳು ಆಗಿದ್ದರು. ಆದರೆ ಇದೀಗ ನಟಿ ಒವಿಯಾ ಬಿಗ್ ಬಾಸ್ ಬ್ಯಾನ್ ಮಾಡುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.  ಅಲ್ಲದೇ ಈ ಬಗ್ಗೆ ಟ್ವೀಟ್ ಮಾಡಿರುವ ನಟಿ, ಬಿಗ್ ಬಾಸ್ ನವರು ತಮ್ಮ ಟಿಆರ್ ಪಿಗಾಗಿ ಸ್ಪರ್ಧಾಳುಗಳಿಗೆ ನೀಡುವ ಮಾನಸಿಕ ಹಿಂಸೆ ಆತ್ಮಹತ್ಯೆ ಮಾಡಿಕೊಳ್ಳದಿದ್ದರೆ ಸಾಕು ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

ಹಾಗೇ ಇನ್ನೊಂದು ಟ್ವೀಟ್ ಮಾಡಿ, ಬಿಗ್ ಬಾಸ್ ನ ಒಪ್ಪಂದದ ಕಾಗದ ಮಾನಸಿಕ ಕಿರುಕುಳ ನೀಡಲು , ಆತ್ಮಹತ್ಯೆಗೆ ಪ್ರೇರೆಪಿಸಲು ಸ್ಪರ್ಧಾಳುಗಳಿಗೆ ನೀಡುವ ಒಪ್ಪಿಗೆ ಪತ್ರವಾಗಬಾರದು. ಶೋ ಬ್ಯಾನ್ ಆಗದಿದ್ದರೂ ಪರವಾಗಿಲ್ಲ, ಆದರೆ ಸ್ಪರ್ಧಾಳುಗಳ ಮೇಲೆ ಕನಿಕರವಿರಲಿ ಎಂದು ಗಂಬೀರವಾಗಿ ಆರೋಪ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ