ಮೂರು ಬಿಗ್ ಸಿನಿಮಾಗಳ ಹಕ್ಕು ಈ ಟಿವಿ ವಾಹಿನಿ ಪಾಲಾಯ್ತು

ಗುರುವಾರ, 19 ಸೆಪ್ಟಂಬರ್ 2019 (09:14 IST)
ಬೆಂಗಳೂರು: ಇತ್ತೀಚೆಗೆ ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಗೂ ಮುನ್ನವೇ ಹಣ ಗಳಿಕೆ ಮಾಡುತ್ತಿರುವುದು ಹೊಸದೇನಲ್ಲ. ಈಗ ತೆಲುಗು ಮೂಲದ ಸೈರಾ ಮತ್ತು ಕನ್ನಡದ ಒಡೆಯ ಸಿನಿಮಾಗಳು ಆ ಸಾಲಿಗೆ ಸೇರಿವೆ.


ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸೈರಾ ತೆಲುಗು ಮಾತ್ರವಲ್ಲದೆ ಕನ್ನಡ, ಹಿಂದಿ ಸೇರಿದಂತೆ ಬಹುಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಸ್ಯಾಟ್ ಲೈಟ್ ಹಕ್ಕನ್ನು ಉದಯ ಟಿವಿ ಖರೀದಿ ಮಾಡಿದೆ. ಮೂಲಗಳ ಪ್ರಕಾರ ಈ ಸಿನಿಮಾ ಬಿಡುಗಡೆಗೂ ಮೊದಲೇ ಕೋಟಿ ಗಳಿಕೆ ಮಾಡಿದೆ ಎನ್ನಲಾಗಿದೆ.

ಇನ್ನು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಒಡೆಯ’ ಸಿನಿಮಾ ಕೂಡಾ ಚಿತ್ರೀಕರಣದ ಹಂತದಲ್ಲಿದ್ದು, ಇನ್ನೂ ಟೀಸರ್ ಕೂಡಾ ಬಿಡುಗಡೆಯಾಗಿಲ್ಲ. ಆದರೆ ಅದಕ್ಕೂ ಮೊದಲೇ ಈ ಸಿನಿಮಾದ ಹಕ್ಕೂ ಉದಯ ಟಿವಿ ಪಾಲಾಗಿದೆ. ಇದಲ್ಲದೆ, ಮುಂದಿನ ವಾರ ತೆರೆಗೆ ಬರಲಿರುವ ಎಪಿ ಅರ್ಜುನ್ ನಿರ್ದೇಶನದ ‘ಕಿಸ್’ ಸಿನಿಮಾ ಹಕ್ಕನ್ನೂ ಉದಯ ಟಿವಿ ಪಡೆದುಕೊಂಡಿದೆ. ಅಲ್ಲಿಗೆ ಮೂರು ಬಿಗ್ ಸಿನಿಮಾಗಳ ಹಕ್ಕನ್ನು ಉದಯ ಟಿವಿ ಖರೀದಿ ಮಾಡಿದಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ