ಜೈಲರ್ ಇಫೆಕ್ಟ್: ಕ್ಯಾಪ್ಟನ್ ಮಿಲ್ಲರ್ ನಲ್ಲಿ ಶಿವಣ್ಣನ ಎಂಟ್ರಿಗೆ ಕಾಯ್ತಿದ್ದಾರೆ ತಮಿಳು ಫ್ಯಾನ್ಸ್

ಸೋಮವಾರ, 14 ಆಗಸ್ಟ್ 2023 (08:40 IST)
ಚೆನ್ನೈ: ರಜನೀಕಾಂತ್ ನಾಯಕರಾಗಿರುವ ಜೈಲರ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅತಿಥಿ ಪಾತ್ರ ತಮಿಳು ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ.

ಕೇವಲ 5 ನಿಮಿಷ ಸ್ಕ್ರೀನ್ ನಲ್ಲಿ ಬಂದರೂ ಎಲ್ಲರಿಗೂ ರೋಮಾಂಚನವಾಗುವಂತೆ ಸ್ಕ್ರೀನ್ ಪ್ರೆಸೆನ್ಸ್ ತೋರಿದ ಶಿವಣ್ಣನಿಗೆ ಈಗ ತಮಿಳು ಸಿನಿಮಾ ಪ್ರೇಕ್ಷಕರಿಂದ ವಿಶೇಷ ಮೆಚ್ಚುಗೆ ಸಿಕ್ಕಿದೆ.

ಜೈಲರ್ ನಲ್ಲಿ ಶಿವಣ್ಣನ ಪಾತ್ರ ನೋಡಿದ ತಮಿಳು ಪ್ರೇಕ್ಷಕರು ಈಗ ಧನುಷ್ ನಾಯಕರಾಗಿರುವ ಕ್ಯಾಪ್ಟನ್ ಮಿಲ್ಲರ್ ಸಿನಿಮಾಗಾಗಿ ಕಾದು ನಿಂತಿದ್ದಾರೆ. ಈ ಸಿನಿಮಾದಲ್ಲೂ ಶಿವಣ್ಣ ಪಾತ್ರ ಮಾಡಿದ್ದು, ಧನುಷ್ ಸಹೋದರನ ಪಾತ್ರ ಮಾಡಿದ್ದಾರೆ. ಈಗಾಗಲೇ ಟೀಸರ್ ನಲ್ಲಿ ಶಿವಣ್ಣ ಕುದುರೆ ಸವಾರಿ ಮಾಡುವ ದೃಶ್ಯಗಳು ಎಲ್ಲರ ಗಮನ ಸೆಳೆದಿತ್ತು. ಇದೀಗ ಕ್ಯಾಪ್ಟನ್ ಮಿಲ್ಲರ್ ನಲ್ಲಿ ಶಿವಣ‍್ಣನ ಪಾತ್ರ ಹೇಗಿರಬಹುದು ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ