ಮದುವೆ ಬಳಿಕ ಮತ್ತೆ ಸಿನಿಮಾಗೆ ಕಮ್ ಬ್ಯಾಕ್ ಮಾಡ್ತಿದ್ದಾರೆ ಹರಿಪ್ರಿಯಾ
ವಸಿಷ್ಠ ಸಿಂಹ ಜೊತೆ ಮದುವೆಯಾದ ಬಳಿಕ ಹರಿಪ್ರಿಯಾ ಕೆಲವು ದಿನ ಕುಟುಂಬದ ಜೊತೆ ಕಾಲ ಕಳೆಯಲು ಸಿನಿಮಾಗಳಿಂದ ಬ್ರೇಕ್ ಪಡೆದಿದ್ದರು. ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಮದುವೆಯಾಗಿ ಆರು ತಿಂಗಳ ಬ್ರೇಕ್ ಪಡೆದು ಈಗ ಮತ್ತೆ ಸಿನಿಮಾಗೆ ಕಮ್ ಬ್ಯಾಕ್ ಮಾಡಲು ರೆಡಿಯಾಗಿದ್ದೇನೆ ಎಂದಿದ್ದಾರೆ ಹರಿಪ್ರಿಯಾ.
ಇದೀಗ ಹೊಸ ಸ್ಕ್ರಿಪ್ಟ್ ಒಂದನ್ನು ಓದುತ್ತಿದ್ದು, ಸದ್ಯದಲ್ಲೇ ಹೊಸ ಸಿನಿಮಾ ಯಾವುದು ಎಂಬ ಬಗ್ಗೆ ಅಪ್ ಡೇಟ್ ಕೊಡುವುದಾಗಿ ಹೇಳಿದ್ದಾರೆ.