ತಮಿಳಿನ ಮರಿನಾ ಸಿನಿಮಾ ನಟ ತೆನ್ನರಸು ಆತ್ಮಹತ್ಯೆ

ಬುಧವಾರ, 30 ಸೆಪ್ಟಂಬರ್ 2020 (11:53 IST)
ಚೆನ್ನೈ : ಆರ್ಥಿಕ ಸಮಸ್ಯೆ ಹಾಗೂ ಕುಟುಂಬ ಕಲಹಕ್ಕೆ ನೊಂದು ತಮಿಳಿನ ಮರಿನಾ ಸಿನಿಮಾ ನಟ ತೆನ್ನರಸು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಟ ತೆನ್ನರಸುಗೆ ಮದುವೆಯಾಗಿದ್ದು, 2 ವರ್ಷದ ಮಗುವಿದೆ. ಕೊರೊನಾ ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ನಟ ಆಗಾಗ ಕುಟುಂಬದವರ ಜೊತೆ ಜಗಳವಾಡುತ್ತಿದ್ದರು ಎನ್ನಲಾಗಿದೆ. ಆದರೆ  ಈ ಸಮಸ್ಯೆಗಳಿಂದ ಬೇಸತ್ತ ನಟ ಮಂಗಳವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ನಟ ಶಿವಕಾರ್ತಿಕೇಯನ್ ಹಾಗೂ ಒಲಿವಿಯಾ ನಟಿಸಿದ್ದ ಮರಿನಾ ಸಿನಿಮಾದಲ್ಲಿ ನಟನ ಆಪ್ತ ಗೆಳೆಯನಾಗಿ ನಟಿಸಿ ಖ್ಯಾತಿ ಗಳಿಸಿದ್ದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ