ಚೆನ್ನೈ ಕಳಪೆ ಪ್ರದರ್ಶನಕ್ಕೆ ಇದುವೇ ಕಾರಣ ಎಂದ ಧೋನಿ

ಶನಿವಾರ, 26 ಸೆಪ್ಟಂಬರ್ 2020 (11:42 IST)
ದುಬೈ: ಪ್ರಬಲ ತಂಡವೆನಿಸಿಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್ ನಲ್ಲಿ ಯಾಕೋ ಮಂಕಾಗಿ ಕುಳಿತಿದೆ. ಸತತ ಎರಡು ಸೋಲುಗಳ ಬಳಿಕ ನಾಯಕ ಧೋನಿ ತಮ್ಮ ಕಳಪೆ ಪ್ರದರ್ಶನಕ್ಕೆ ಕಾರಣ ತಿಳಿಸಿದ್ದಾರೆ.


ಸುರೇಶ್ ರೈನಾ ಕೂಡಾ ತಂಡದಿಂದ ಹೊರಬಂದ ಮೇಲೆ ಚೆನ್ನೈ ಬ್ಯಾಟಿಂಗ್ ಬಲಗುಂದಿತ್ತು. ಆದರೆ ಅಂಬಟಿ ರಾಯುಡು ಆಸರೆಯಾಗಿದ್ದರು. ಆದರೆ ಗಾಯಗೊಂಡಿರುವ ರಾಯುಡು ನಿನ್ನೆಯ ಪಂದ್ಯದಲ್ಲಿ ಆಡಿರಲಿಲ್ಲ. ರಾಯುಡು ಇಲ್ಲದೇ ಮಧ‍್ಯಮ ಕ್ರಮಾಂಕದಲ್ಲಿ ಬಡವಾಗಿದೆ. ಇದುವೇ ನಮ್ಮ ರನ್ ಗಳಿಕೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ಧೋನಿ ಸೋಲಿನ ನಂತರ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ