‘ರಾಧೆ ಶ್ಯಾಮ’ ಚಿತ್ರದಲ್ಲಿ ಪ್ರಭಾಸ್ ಪಾತ್ರದ ಹೆಸರು ರಿವಿಲ್ ಮಾಡಿ ಟ್ವಿಸ್ಟ್ ನೀಡಿದ ಚಿತ್ರತಂಡ
ಗುರುವಾರ, 22 ಅಕ್ಟೋಬರ್ 2020 (11:44 IST)
ಹೈದರಾಬಾದ್ : ನಟ ಪ್ರಬಾಸ್ ಅವರ ಜನ್ಮ ದಿನದ ಉಡುಗೊರೆಯಾಗಿ ‘ರಾಧೆ ಶ್ಯಾಮ’ ಚಿತ್ರದಲ್ಲಿ ಪ್ರಭಾಸ್ ಪಾತ್ರವನ್ನು ಪರಿಚಯಿಸುತ್ತಾ ಚಿತ್ರತಂಡವು ಪೋಸ್ಟರ್ ಬಿಡುಗಡೆ ಮಾಡುವುದರ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದೆ.
ರಾಧೆ ಶ್ಯಾಮ ಚಿತ್ರದಲ್ಲಿ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ರಾಧಾಕೃಷ್ಣ ನಿರ್ದೇಶಿಸುತ್ತಿದ್ದು, ಯುವಿ ಕ್ರಿಯೇಷನ್ಸ್ ನಿರ್ಮಿಸುತ್ತಿದೆ. ಪ್ರಭಾಸ್ ಅವರು ಈ ತಿಂಗಳ 23ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅದಕ್ಕಾಗಿ ಮುಂಗಡವಾಗಿ ಉಡುಗೊರೆಯಾಗಿ ಚಿತ್ರತಂಡವು ಪೋಸ್ಟರ್ ಬಿಡುಗಡೆ ಮಾಡಿದೆ. ಚಿತ್ರದಲ್ಲಿ ಪ್ರಭಾಸ್ ಹೆಸರು ವಿಕ್ರಮಾದಿತ್ಯ ಎಂಬುದಾಗಿ ತಿಳಿದುಬಂದಿದೆ.
ಆದರೆ ಸಿನಿಮಾ ಹೆಸರು ‘ರಾಧೆ ಶ್ಯಾಮ’ ಇದ್ದ ಕಾರಣ ನಾಯಕಿ ಹೆಸರು ರಾಧೆ, ನಾಯಕನ ಹೆಸರು ಶ್ಯಾಮ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಚಿತ್ರತಂಡ ಪ್ರಭಾಸ್ ಹೆಸರು ವಿಕ್ರಮಾದಿತ್ಯ ಎಂದು ಪರಿಚಯಿಸುವುದರ ಮೂಲಕ ಟ್ವಿಸ್ಟ್ ನೀಡಿದ್ದಾರೆ.