ದರ್ಶನ್ ರಾಬರ್ಟ್ ಗೆ ಜತೆಯಾದ ಅಪ್ಪಟ ಕನ್ನಡ ಚೆಲುವೆ

ಶನಿವಾರ, 21 ಡಿಸೆಂಬರ್ 2019 (10:59 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾಗೆ ಮತ್ತೊಬ್ಬ ಚೆಲುವೆಯ ಪ್ರವೇಶವಾಗಿದೆ. ಅಪ್ಪಟ ಕನ್ನಡತಿ ತೇಜಸ್ವಿನಿ ಪ್ರಕಾಶ್ ರಾಬರ್ಟ್ ತಂಡ ಕೂಡಿಕೊಂಡಿದ್ದಾರೆ.


ರಾಬರ್ಟ್ ಚಿತ್ರಕ್ಕೆ ಆಶಾ ಭಟ್ ನಾಯಕಿಯಾಗಿ ಆಯ್ಕೆಯಾಗಿದ್ದರು. ಅವರ ಜತೆಗೆ ತೇಜಸ್ವಿನಿ ಪ್ರಕಾಶ್ ಪ್ರಮುಖ ಪಾತ್ರ ನಿಭಾಯಿಸಲಿದ್ದಾರೆ ಎಂಬ ಸುದ್ದಿ ಚಿತ್ರತಂಡ ಹೊರಹಾಕಿದೆ.

ಹಿಂದೊಮ್ಮೆ ಗಜ ಸಿನಿಮಾದಲ್ಲಿ ದರ್ಶನ್ ಜತೆಗೆ ಅಭಿನಯಿಸಿದ್ದ ತೇಜಸ್ವಿನಿ ಈಗ ಮತ್ತೆ ಡಿ ಬಾಸ್ ಚಿತ್ರದಲ್ಲಿ ಅವಕಾಶ ಪಡೆದಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಮೇಲೆ ತೇಜಸ್ವಿನಿ ಅಷ್ಟಾಗಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಭರ್ಜರಿಯಾಗಿ ಎಂಟ್ರಿ ಕೊಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ