ಯಶ್ ಜೊತೆ ಸಿನಿಮಾ ಕನ್ ಫರ್ಮ್ ಮಾಡಿದ ತೆಲುಗು ನಿರ್ಮಾಪಕ

ಶುಕ್ರವಾರ, 7 ಏಪ್ರಿಲ್ 2023 (09:10 IST)
ಬೆಂಗಳೂರು: ಕೆಜಿಎಫ್ ‍ಸ್ಟಾರ್ ಯಶ್ ಜೊತೆ ಸಿನಿಮಾ ಮಾಡಲಿರುವುದಾಗಿ ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಸ್ಪಷ್ಟಪಡಿಸಿದ್ದಾರೆ.

ಕೆಜಿಎಫ್ ಸಿನಿಮಾ ಬಳಿಕ ಯಶ್ ಜನಪ್ರಿಯತೆ ತೆಲುಗಿನಲ್ಲೂ ಹೆಚ್ಚಾಗಿದೆ. ಪರಭಾಷಾ ನಿರ್ಮಾಪಕರೂ ಯಶ್ ಕಾಲ್ ಶೀಟ್ ಗಾಗಿ ಕಾಯುತ್ತಿದ್ದಾರೆ. ಯಶ್ ಮುಂದಿನ ಸಿನಿಮಾ ಇನ್ನೂ ಘೋಷಣೆಯಾಗಿಲ್ಲ. ಮೂಲಗಳ ಪ್ರಕಾರ ಯಶ್ ಕೆಲವು ಖ್ಯಾತ ನಿರ್ದೇಶಕರ ಜೊತೆ ಸಿನಿಮಾ ಮಾಡಲಿದ್ದಾರೆ. ಆದರೆ ಯಾವುದನ್ನೂ ಘೋಷಣೆ ಮಾಡಿಲ್ಲ.

ಇದರ ನಡುವೆಯೇ ದಿಲ್ ರಾಜು ಅಭಿಮಾನಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಯಶ್ ಜೊತೆ ಕೆಲಸ ಮಾಡುತ್ತೀರಾ ಎಂಬ ಪ್ರಶ್ನೆಗೆ ಹೌದು ಎಂದು ಉತ್ತರಿಸಿದ್ದಾರೆ. ಹೀಗಾಗಿ ಯಶ್ ಮುಂದಿನ ಸಿನಿಮಾಗೆ ದಿಲ್ ರಾಜು ಬಂಡವಾಳ ಹೂಡುತ್ತಾರಾ ಎಂಬ ಪ್ರಶ್ನೆ ಮೂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ