ಆರ್ ಆರ್ ಆರ್ ತಂಡಕ್ಕೆ ಶುಭ ಕೋರದ ವಿಜಯ್: ದಳಪತಿ ಹೀಗ್ಯಾಕೆ?!

ಗುರುವಾರ, 16 ಮಾರ್ಚ್ 2023 (09:40 IST)
ಚೆನ್ನೈ: ಆರ್ ಆರ್ ಆರ್ ಸಿನಿಮಾದ ನಾಟ್ಟು ನಾಟ್ಟು ಹಾಡು ಮೊನ್ನೆಯಷ್ಟೇ ಆಸ್ಕರ್ ಪ್ರಶಸ್ತಿ ಪಡೆದಿದ್ದನ್ನು ಇಡೀ  ವಿಶ್ವವೇ ಸಂಭ್ರಮಿಸಿತ್ತು.

ಅದರಲ್ಲೂ ಭಾರತ ಚಿತ್ರರಂಗದ ಅನೇಕ ದಿಗ್ಗಜರು ಸೋಷಿಯಲ್ ಮೀಡಿಯಾ ಮೂಲಕ ಶುಭ ಕೋರಿ ಚಿತ್ರತಂಡಕ್ಕೆ ಬೆಂಬಲ ನೀಡಿದ್ದರು. ಆದರೆ ದಳಪತಿ ವಿಜಯ್ ಮಾತ್ರ ಒಂದೇ ಒಂದು ಮಾತನಾಡಿರಲಿಲ್ಲ.

ಇದು ಹಲವರ ಆಕ್ಷೇಪಕ್ಕೆ ಕಾರಣವಾಗಿದೆ. ವಿಜಯ್ ಗೆ ಬಾಲಿವುಡ್ ನ ಪಠಾಣ್ ಸಿನಿಮಾವನ್ನು ಪ್ರಮೋಟ್ ಮಾಡಲು ಸಮಯವಿರುತ್ತದೆ. ಆದರೆ ನಮ್ಮದೇ ದಕ್ಷಿಣದ ಸಿನಿಮಾವೊಂದು ದೇಶಕ್ಕೆ ಮೊದಲ ಬಾರಿಗೆ ಆಸ್ಕರ್ ತಂದುಕೊಟ್ಟಿದ್ದನ್ನು ಸಂಭ್ರಮಿಸುವ ಉದಾರ ಮನಸ್ಸಿಲ್ಲ ಎಂದು ಕೆಲವರು ಟಾಂಗ್ ಕೊಟ್ಟಿದ್ದಾರೆ. ತೆಲುಗು ಸಿನಿಮಾ ರಂಗದಿಂದ ವಿಜಯ್ ಕೆಲವು ಸಮಯದಿಂದ ದೂರವೇ ಇದ್ದಾರೆ. ಅವರ ಸಿನಿಮಾಗಳನ್ನೂ ತೆಲುಗಿನಲ್ಲಿ ಪ್ರಮೋಟ್ ಕೂಡಾ ಮಾಡಲ್ಲ. ಹೀಗಾಗಿ ಈಗ ಆರ್ ಆರ್ ಆರ್ ಸಕ್ಸಸ್ ನ್ನು ಹೊಗಳುವ ಉದಾರ ಮನಸ್ಸು ತೋರಿಸಿಲ್ಲ. ಅಷ್ಟಕ್ಕೂ ವಿಜಯ್ ಗೆ ತೆಲುಗು ಸಿನಿಮಾ ಮೇಲೆ ಯಾಕೆ ಈ ಮುನಿಸು ಎಂದು ತಿಳಿದುಬಂದಿಲ್ಲ.

ವೆಬ್ದುನಿಯಾವನ್ನು ಓದಿ