ಪ್ರೇಮ ವಿವಾಹಕ್ಕೆ ಅಡ್ಡಿಗಳಾಗುತ್ತಿದ್ದರೆ ಈ ದೇವರನ್ನು ಪೂಜೆ ಮಾಡಿ

Krishnaveni K

ಶುಕ್ರವಾರ, 24 ಮೇ 2024 (11:42 IST)
ಬೆಂಗಳೂರು: ಇಂದಿನ ದಿನಗಳಲ್ಲಿ ಪ್ರೇಮ ವಿವಾಹಗಳು ಸಾಮಾನ್ಯ. ಅದೇ ರೀತಿ ಪ್ರೇಮ ವಿವಾಹಕ್ಕೆ ಹಿರಿಯರ ಒಪ್ಪಿಗೆ ಸಿಗುವುದೂ ಅಷ್ಟು ಸುಲಭವಲ್ಲ. ಹಾಗಿದ್ದರೆ ಪ್ರೇಮ ವಿವಾಹಕ್ಕೆ ಬರುವ ಅಡ್ಡಿ ಆತಂಕಗಳನ್ನು ನಿವಾರಿಸಲು ಏನು ಮಾಡಬೇಕು ಇಲ್ಲಿ ನೋಡಿ.

ಪ್ರೇಮ ವಿವಾಹದ ಸಂದರ್ಭದಲ್ಲಿ ಒಂದೋ ಜಾತಕಕ್ಕೆ ಸಂಬಂಧಿಸಿದ ದೋಷಗಳಿಂದಾಗಿ ಅಡ್ಡಿ ಆತಂಕಗಳಿರಬಹುದು. ಇಲ್ಲವೇ ಮನೆಯವರಿಂದ ಒಪ್ಪಿಗೆ ಸಿಗದೇ ಪ್ರೇಮಿಗಳು ಕಷ್ಟಪಡಬೇಕಾದೀತು. ಒಟ್ಟಿನಲ್ಲಿ ಪ್ರೇಮ ವಿವಾಹಕ್ಕೆ ಏನೇ ಅಡ್ಡಿ ಆತಂಕಗಳಿದ್ದರೂ ನಾವು ಪೂಜಿಸಬೇಕಾದ ದೇವರೆಂದರೆ ಭಗವಾನ್ ಶ್ರೀಕೃಷ್ಣನನ್ನು.

ಶ್ರೀಕೃಷ್ಣ ಪ್ರೇಮದ ಪ್ರತೀಕ. ಪ್ರೇಮಿಗಳು ಹೆಚ್ಚಾಗಿ ಆರಾಧಿಸುವ ದೈವವೆಂದರೆ ಕೃಷ್ಣ. ರಾಧಾ-ಕೃಷ್ಣರ ಪ್ರೇಮ ಎಷ್ಟೋ ಪ್ರೇಮಿಗಳಿಗೆ ಆದರ್ಶ. ಹೀಗಾಗಿ ಪ್ರೇಮ  ವಿವಾಹಕ್ಕೆ ಅಡ್ಡಿಗಳಾಗುತ್ತಿದ್ದರೆ ಶ್ರೀಕೃಷ್ಣನ ಮಂದಿರಕ್ಕೆ ತೆರಳಿ ಕೃಷ್ಣನಿಗೆ ಪೂಜೆ ಸಲ್ಲಿಸಿ. ಅಥವಾ ಮನೆಗೆ ಕೃಷ್ಣನ ವಿಗ್ರಹ ತಂದು ಪೂಜೆ ಮಾಡಿ. ಅಲ್ಲದೆ, ಕೃಷ್ಣನ ದೇವಾಲಯಕ್ಕೆ ಕೊಳಲನ್ನು ಹರಕೆಯಾಗಿ ನೀಡಿ. ಇದರಿಂದ ಒಳಿತಾಗುವುದು.

ಅದಲ್ಲದೆ, ಕುಜ ಗ್ರಹನಿಗೆ ಸಂಬಂಧಪಟ್ಟಂತೆ ಮಂಗಳ ದೋಷ ನಿವಾರಣೆ ಪೂಜೆ ಮಾಡಿ ವಿವಾಹಕ್ಕೆ ಬರುವ ಅಡ್ಡಿ ಆತಂಕಗಳನ್ನು ಕಳೆಯಿರಿ. ಅಲ್ಲದೆ, ವಿವಾಹ ನಂತರ ಸುಖ, ಸಂತೋದಾಯಕ ದಾಂಪತ್ಯ ನಿಮ್ಮದಾಗಬೇಕಾದರೆ ಉಮಾ ಮಹೇಶ್ವರನ ಪೂಜೆ ಮಾಡುತ್ತಿರಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ