ನಟಿ ಶ್ರೀಸುಧಾ ಮೇಲೆ ಹಲ್ಲೆ ; ಪ್ರಕರಣದ ಹಿಂದೆ ಮಾಜಿ ಪ್ರೇಮಿಯ ಕೈವಾಡ ಶಂಕೆ

ಭಾನುವಾರ, 28 ಫೆಬ್ರವರಿ 2021 (11:43 IST)
ಹೈದರಾಬಾದ್ : ತೆಲುಗು ನಟಿ ಶ್ರೀಸುಧಾ ಅವರು ಛಾಯಾಗ್ರಾಹಕ ಶ್ಯಾಮ್ ಕೆ ನಾಯ್ಡು ಅವರೊಂದೊಗೆ ಸಂಬಂಧ ಹೊಂದಿದ್ದು, ಬಳಿಕ ಮೋಸ ಮಾಡಿದ್ದಾರೆ ಎಂದು ಶ್ರೀಸುಧಾ ಆರೋಪಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿದ ಹಿನ್ನಲೆಯಲ್ಲಿ ಅವರನ್ನು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಆದರೆ ಇತ್ತೀಚೆಗೆ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಕೆಲವು ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ಮಾಡಿದ್ದು, ಅವರು ಹೇಗೋ ಬಚಾವ್ ಆಗಿದ್ದಾರೆ.  ಈ ಬಗ್ಗೆ ಶ್ರೀಸುಧಾ ವಿಜಯವಾಡದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಗಟನೆಯ ಹಿಂದೆ ಛಾಯಾಗ್ರಾಹಕ ಶ್ಯಾಮ್ ಕೆ ನಾಯ್ಡು ಇದ್ದಾರೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ