ಮತ್ತೆ ಒಂದಾಗಲಿದೆ ಸೂರ್ಯ-ಕಾರ್ತಿ ಜೋಡಿ

ಶುಕ್ರವಾರ, 26 ಮಾರ್ಚ್ 2021 (11:04 IST)
ಚೆನ್ನೈ : ನಟ ಕಾರ್ತೀ ಅವರು ಶೀಘ್ರದಲ್ಲಿಯೇ ತಮ್ಮ ಸಹೋದರ ನಟ ಸೂರ್ಯ  ನಿರ್ಮಿಸುತ್ತಿರುವ  ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ. ಇದನ್ನು ಮುತ್ತಯ್ಯ ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ.

ಕಾರ್ತಿ ಅವರೊಂದಿಗೆ ಮುತ್ತಯ್ಯ ಅವರು’ಕೊಂಬನ್’ ಅನ್ನು ನಿರ್ದೇಶಿಸಿದ್ದರು. 2015ರಲ್ಲಿ ಬಿಡುಗಡೆಯಾದ ಈ ಚಿತ್ರ ಭಾರೀ ಯಶಸ್ಸನ್ನು ಕಂಡಿದೆ. ಈ ಚಿತ್ರದ ಸೀಕ್ವೆಲ್ ನ್ನು ಇದೀಗ ಸೂರ್ಯ ನಿರ್ಮಿಸಲು ಹೊರಟಿದ್ದಾರೆ. ಇದರಲ್ಲಿ ರಾಜ್ ಕಿರಣ್, ಲಕ್ಷ್ಮಿ ಮೆನನ್  ಮತ್ತು ಸೂರಿ ತಮ್ಮ ಪಾತ್ರಗಳನ್ನು ಪುನರಾವರ್ತಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸೂರ್ಯ ಈ ಹಿಂದೆ ಪಾಂಡಿರಾಜ್ ನಿರ್ದೇಶನದ ಕಾರ್ತಿ ಅವರ ‘ಕಡೈಕುಟ್ಟಿ’ ಚಿತ್ರವನ್ನು ನಿರ್ಮಿಸಿದ್ದರು. ಇದು ಗಲ್ಲಾ ಪೆಟ್ಟಿಗೆಯಲ್ಲಿ ಭಾರೀ ಯಶಸ್ಸನ್ನು ಕಂಡಿದೆ. ಇದೀಗ ಮತ್ತೆ ಈ ಜೋಡಿ ಒಂದಾಗುತ್ತಿದೆ. ಇದು ಅಭಿಮಾನಿಗಳಿಗೆ ಸಂತಸ ನೀಡಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ