ಸೆಪ್ಟೆಂಬರ್ ನಲ್ಲಿ ಚಿತ್ರಮಂದಿರಗಳು ಓಪನ್ ಸಾಧ್ಯತೆ

ಗುರುವಾರ, 20 ಆಗಸ್ಟ್ 2020 (13:07 IST)
ಬೆಂಗಳೂರು: ಲಾಕ್ ಡೌನ್ ಬಳಿಕ ಎಲ್ಲಾ ಓಪನ್ ಆಗಿದೆ, ಆದರೆ ಚಿತ್ರ ಮಂದಿರ ಯಾವಾಗ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ ಕಾದಿದೆ.


ಚಿತ್ರರಂಗದ ಮಂದಿ ಈಗಾಗಲೇ ತಮ್ಮ ಸಾಲು ಸಾಲು ಸಿನಿಮಾಗಳನ್ನಿಟ್ಟು ಬಿಡುಗಡೆಗಾಗಿ ಕಾದು ನಿಂತಿದ್ದಾರೆ. ಈ ನಡುವೆ ಸೆಪ್ಟೆಂಬರ್ ನಿಂದ ಥಿಯೇಟರ್ ಓಪನ್ ಮಾಡಲು ಅನುಮತಿ ಸಿಗಬಹುದು ಎಂಬ ಮಾತು ಕೇಳಿಬರುತ್ತಿದೆ.

ಸಾಮಾಜಿಕ ಅಂತರ, ಸ್ಯಾನಿಟೈಸೇಷನ್ ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಚಿತ್ರಮಂದಿರಗಳನ್ನು ತೆರೆಯಲು ಸರ್ಕಾರ ಮುಂದಿನ ತಿಂಗಳಿನಿಂದ ಒಪ್ಪಿಗೆ ನೀಡುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ