ಸುಂದರ್ ಸಿ ನಿರ್ದೇಶನದ ಚಿತ್ರದಲ್ಲಿ ಕಥೆ ಕೇಳದೆ ನಟಿಸಲು ಸಿದ್ಧರಿದ್ದರಂತೆ ಈ ಹಾಸ್ಯನಟ

ಶುಕ್ರವಾರ, 23 ಅಕ್ಟೋಬರ್ 2020 (12:14 IST)
ಚೆನ್ನೈ : ಸುಂದರ್ ಸಿ ತಮಿಳು ಚಿತ್ರರಂಗದ ಪ್ರಸಿದ್ಧ ನಿರ್ದೇಶಕ. ಅರಮನೆ, ಅರಮನೆ 2 ಅಂತಹ ಅನೇಕ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಮತ್ತು ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಈಗ ಒಬ್ಬ ಪ್ರಸಿದ್ಧ ಹಾಸ್ಯನಟ ಅವರ  ಬಗ್ಗೆ ಹೇಳಿದ್ದು  ಎಲ್ಲರಿಗೂ ಆಶ್ವರ್ಯವನ್ನುಂಟುಮಾಡಿದೆ.

ಯೋಗಿ ಬಾಬು ಎಷ್ಟು ಪ್ರಸಿದ್ಧರಾಗಿದ್ದಾರೆಂದರೆ ಅವರನ್ನು ಹಾಸ್ಯದಲ್ಲಿ ಸೋಲಿಸಲು ತಮಿಳು ಚಿತ್ರರಂಗದಲ್ಲಿ ಯಾರಿಂದಲೂ ಸಾಧ್ಯವಿಲ್ಲ ಎನ್ನಲಾಗಿದೆ. ಹಾಗೇ ಇವರು ನಿರ್ದೇಶಕ ಸುಂದರ್ ಸಿ ನಿರ್ದೇಶನದ ಚಿತ್ರಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ.

ಹೀಗಿರುವಾಗ ಯೋಗಿಬಾಬು ಅವರು  ನಿರ್ದೇಶಕ ಸುಂದರ್ ಸಿ ಬಗ್ಗೆ ಆಸಕ್ತಿದಾಯಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಅದೇನೆಂದರೆ ಇಂತಹ ಖ್ಯಾತ ಹಾಸ್ಯ ನಟ ಸುಂದರ್ ಸಿ ನಿರ್ದೇಶನದ ಚಿತ್ರಗಳಲ್ಲಿ ಕಥೆಯನ್ನು ಕೇಳದೆ ನಟಿಸಲು ಯಾವಾಗಲೂ ಸಿದ್ಧರಿದ್ದಾರಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ