ಇವರೇ ನೋಡಿ ನಟಿ ಕೀರ್ತಿ ಸುರೇಶ್ ಕೈ ಹಿಡಿಯಲಿರುವ ಹುಡುಗ

Sampriya

ಮಂಗಳವಾರ, 19 ನವೆಂಬರ್ 2024 (19:38 IST)
Photo Courtesy X
ಕಳೆದ ಕೆಲ ದಿನಗಳಿಂದ ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಅವರ ಮದುವೆ ಸುದ್ದಿ ಜೋರಾಗಿಯೇ ಹರಿದಾಡುತ್ತಿದೆ. ಇದೀಗ ವೈರಲ್‌ ಆಗುತ್ತಿರುವ ಸುದ್ದಿ ಪ್ರಕಾರ ಕೀರ್ತಿ ಸುರೇಶ್ ಅವರು ತಮ್ಮ ಬಹುಕಾಲದ ಗೆಳೆಯನ ಜತೆ ಡಿಸೆಂಬರ್ ತಿಂಗಳಿನಲ್ಲಿ ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗುತ್ತಿದೆ.

ತಮ್ಮ ಬಹುಕಾಲದ ಗೆಳೆಯ ಆಂಟೋನಿ ತಟ್ಟಿಲ್ ಅವರನ್ನು ಕೀರ್ತಿ ಕೈಹಿಡಿಯಲಿದ್ದಾರೆ. 15 ವರ್ಷಗಳ ಇವರಿಬ್ಬರ ಸ್ನೇಹ, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ. ಸಿಕ್ಕಿರುವ ಮಾಹಿತಿ ಪ್ರಕಾರ ಈ ಜೋಡಿ ಗೋವಾದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದೆ. ಆಂಟೊನಿ ದುಬೈ ಮೂಲದ ಉದ್ಯಮಿ. ತಮ್ಮ ಮದುವೆಯ ವದಂತಿಗಳ ಬಗ್ಗೆ ಇದುವರೆಗೆ ನಟಿ ಹೇಳಿಕೊಂಡಿಲ್ಲ. ಶೀಘ್ರದಲ್ಲೇ ಅವರು ಅಧಿಕೃತ ಘೋಷಣೆ ಮಾಡುವ ನಿರೀಕ್ಷೆಯಿದೆ.

ಇನ್ನು ವಿವಾಹ ಸಮಾರಂಭದಲ್ಲಿ ಕುಟುಂಬದವರು ಹಾಗೂ ಆಪ್ತರಷ್ಟೇ ಭಾಗಿಯಾಗಲಿದ್ದಾರೆ.  ಅತಿಥಿಗಳ ಪಟ್ಟಿಯನ್ನು ಇನ್ನೂ ಬಹಿರಂಗಪಡಿಸಬೇಕಾಗಿದೆ. ವರದಿಗಳ ಪ್ರಕಾರ ಆಂಟೋನಿ ತಟ್ಟಿಲ್ ಮತ್ತು ಕೀರ್ತಿ ಸುರೇಶ್ ತಮ್ಮ ಶಾಲಾ ಶಿಕ್ಷಣವನ್ನು ಒಟ್ಟಿಗೆ ಪಡೆದಿದ್ದರು. ಅಂದಿನ ಸ್ನೇಹ, ಪ್ರೀತಿಗೆ ತಿರುಗಿ ಹಲವು ವರ್ಷಗಳಿಂದ ಡೇಟಿಂಗ್‌ನಲ್ಲಿದ್ದರು ಎಂಬ ಮಾಹಿತಿಯಿದೆ.

ಕೀರ್ತಿ ಸುರೇಶ್ ಚಿತ್ರ ನಿರ್ಮಾಪಕ ಜಿ ಸುರೇಶ್ ಕುಮಾರ್ ಮತ್ತು ನಟಿ ಮೇನಕಾ ಅವರ ಪುತ್ರಿ. ಅವರು 2000 ರಲ್ಲಿ ಬಾಲ ಕಲಾವಿದೆಯಾಗಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಅವರು ಮಲಯಾಳಂ ಚಲನಚಿತ್ರ ಗೀತಾಂಜಲಿಯಲ್ಲಿ ಪ್ರಮುಖ ಪಾತ್ರದಲ್ಲಿ ಪಾದಾರ್ಪಣೆ ಮಾಡಿದರು. ಇವರಿಗೆ ನಟ ಸಾವಿತ್ರಿಯವರ ಜೀವನಾಧಾರಿತ ಮಹಾನಟಿ ಸಿನಿಮಾದ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಲಭಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ