‘ಸರ್ಕಾರು ವಾರಾ ಪಾಟಾ’ ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡಲಿದ್ದಾರಂತೆ ಈ ಸ್ಟಾರ್ ನಟ

ಸೋಮವಾರ, 19 ಏಪ್ರಿಲ್ 2021 (09:29 IST)
ಹೈದರಾಬಾದ್ : ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಅಭಿನಯದ ‘ಸರ್ಕಾರು ವಾರಾ ಪಾಟಾ’ ಚಿತ್ರದಲ್ಲಿ ಸ್ಟಾರ್ ನಟರೊಬ್ಬರು ಖಳನಾಯಕನ ಪಾತ್ರ ಮಾಡಲಿದ್ದಾರಂತೆ.

ಮಹೇಶ್ ಬಾಬು ಹಾಗೂ ನಟಿ ಕೀರ್ತಿ ಸುರೇಶ್ ಅಭಿನಯದ ‘ಸರ್ಕಾರು ವಾರಾ ಪಾಟಾ’ ಚಿತ್ರ ಬ್ಯಾಂಕ್ ಹಗರಣಕ್ಕೆ ಸಂಬಂಧಪಟ್ಟ ಚಿತ್ರವಾಗಿದೆ. ಈ ಹಿಂದೆ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ನಟ ಉಪೇಂದ್ರ ಹಾಗೂ ಕಾಲಿವುಡ್ ನಟ ಅರವಿಂದ ಸ್ವಾಮಿ ಖಳನಾಯಕನ ಪಾತ್ರ ಮಾಡಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು.

ಆದರೆ ಇತ್ತೀಚಿನ ಮಾಹಿತಿ ಪ್ರಕಾರ ಇದರಲ್ಲಿ ಖಳನಾಯಕನ ಪಾತ್ರಕ್ಕಾಗಿ  ನಿರ್ಮಾಪಕರು ತಮಿಳು ನಟ ಮಾಧವನ್ ಅವರನ್ನು ಸಂಪರ್ಕಿಸಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ