ಥೇಟ್ ಯಶ್ ರಂತೇ ಕಾಣುವ ಈ ಸೂಪರ್ ಸ್ಟಾರ್ ಯಾರು ಗೊತ್ತಾ?!

ಮಂಗಳವಾರ, 28 ಮಾರ್ಚ್ 2023 (09:00 IST)
Photo Courtesy: Twitter
ಹೈದರಾಬಾದ್: ಟಾಲಿವುಡ್ ಸ್ಟಾರ್ ರಾಮ್ ಚರಣ್ ಹುಟ್ಟುಹಬ್ಬದ ಪ್ರಯುಕ್ತ ನಿನ್ನೆ ಅವರ ಹೊಸ ಸಿನಿಮಾ ಟೈಟಲ್ ಮತ್ತು ಫಸ್ಟ್ ಲುಕ್ ಬಿಡುಗಡೆಯಾಗಿತ್ತು.

ರಾಮ್ ಚರಣ್ ಮುಂದಿನ ಸಿನಿಮಾಗೆ ಗೇಮ್ ಚೇಂಜರ್ ಎಂದು ಟೈಟಲ್ ಘೋಷಣೆಯಾಗಲಿದೆ. ಆದರೆ ಪೋಸ್ಟರ್ ನೋಡಿದ ಫ್ಯಾನ್ಸ್ ಗೆ ಇದು ರಾಮ್ ಚರಣ್ ಅವರೇನಾ ಅಲ್ಲಾ ರಾಕಿಂಗ್ ಸ್ಟಾರ್ ಯಶ್ ಅವರಾ ಎಂದು ಕನ್ ಫ್ಯೂಸ್ ಆಗಿದೆ!

ಬೈಕ್ ಮೇಲೆ ನಾಯಕ ಕೂತಿರುವ ಈ ಪೋಸ್ಟರ್ ನೋಡಿದರೆ ಥೇಟ್ ಯಶ್ ರಂತೇ ಕಾಣುತ್ತಾರೆ. ಕೆಜಿಎಫ್ ಸಿನಿಮಾಗೆ ಮೊದಲು ಯಶ್ ಹೇಗೆ ಕಾಣುತ್ತಿದ್ದರೋ ಹಾಗೇ ಇಲ್ಲಿ ರಾಮ್ ಚರಣ್ ಹೋಲುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ