ಬೆಂಗಳೂರು: 14.56 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಣೆ ಆರೋಪದಲ್ಲಿ ಜೈಲು ಪಾಲಾಗಿರುವ ನಟಿ ರನ್ಯಾ ರಾವ್ ಅವರು ಸೋಮವಾರ ನ್ಯಾಯಾಲಯದಲ್ಲಿ ಕಣ್ಣೀರು ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಕಂದಾಯ ಗುಪ್ತಚರ ನಿರ್ದೇಶನಾಲಯದ ಕಸ್ಟಡಿಯಲ್ಲಿ "ಮಾನಸಿಕವಾಗಿ ಚಿತ್ರಹಿಂಸೆ ನೀಡಲಾಗಿದೆ ಮತ್ತು ಬೆದರಿಕೆ ಹಾಕಲಾಗಿದೆ" ಎಂದು ರನ್ಯ ರಾವ್ ಹೇಳಿಕೊಂಡಿದ್ದಾರೆ.
"ನನಗೆ ಮೌಖಿಕ ಹಿಂಸೆ ನೀಡಿ ಬೆದರಿಕೆ ಹಾಕಲಾಯಿತು. ನಾನು ಆಘಾತಕ್ಕೊಳಗಾಗಿದ್ದೇನೆ ಮತ್ತು ಭಾವನಾತ್ಮಕವಾಗಿ ಮುರಿದುಹೋಗಿದ್ದೇನೆ" ಎಂದು ನಟ ಹೇಳಿಕೊಂಡರು.
"ತನಿಖೆಯಲ್ಲಿ ಸಹಕರಿಸುತ್ತಿದ್ದೇನೆ, ನಿನ್ನೆಯ ದಿನಾಂಕವಿರುವ ದಾಖಲೆಗೆ ಇಂದು ಸಹಿ ಹಾಕಲು ನನ್ನನ್ನು ಕೇಳಲಾಯಿತು, ಆದರೆ ನಾನು ನಿರಾಕರಿಸಿದೆ" ಎಂದು ಅಳುತ್ತಾ ರನ್ಯಾ ರಾವ್ ನ್ಯಾಯಾಧೀಶರಿಗೆ ಹೇಳಿದರು. ಡಿಆರ್‌ಐ ಅಧಿಕಾರಿಗಳು ತನಗೆ ಮೌಖಿಕ ಬೆದರಿಕೆ ಹಾಕಿದ್ದಾರೆ ಎಂದು ನಟಿ ಆರೋಪಿಸಿದರು.
ಇಡೀ ವಿಚಾರಣೆಯನ್ನು ವೀಡಿಯೊ ರೆಕಾರ್ಡ್ ಮಾಡಲಾಗಿದೆ ಮತ್ತು ಅದರ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ ನ್ಯಾಯಾಲಯಕ್ಕೆ ತಿಳಿಸಿದೆ. ನಟಿ ತನಿಖೆಯಲ್ಲಿ ಸಹಕರಿಸುತ್ತಿಲ್ಲ ಎಂದು ಡಿಆರ್‌ಐ ಹೇಳಿದೆ.