ಇಂದು ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಯಾಗಲಿದೆ ಮೂರು ಪ್ರಮುಖ ಸಿನಿಮಾಗಳು

ಶುಕ್ರವಾರ, 28 ಫೆಬ್ರವರಿ 2020 (09:03 IST)
ಬೆಂಗಳೂರು: ಶುಕ್ರವಾರ ಬಂತೆಂದರೆ ಗಾಂಧಿನಗರ ಫುಲ್ ಬ್ಯುಸಿಯಾಗಿರುತ್ತದೆ. ಇಂದು ಸ್ಯಾಂಡಲ್ ವುಡ್ ನಲ್ಲಿ ಮೂರು ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಯಾಗಲಿದ್ದು, ರಸದೌತಣ ನೀಡಲಿದೆ.


ಮೊದಲನೆಯದಾಗಿ ಪುನೀತ್ ರಾಜಕುಮಾರ್ ನಿರ್ಮಾಣದ ‘ಮಾಯಾಬಜಾರ್ 2016’ ಸಿನಿಮಾ. ಇಲ್ಲಿ ನಾಯಕ-ನಾಯಕಿ ಅಂತ ಯಾರೂ ಇಲ್ಲ. ಎಲ್ಲಾ ಪಾತ್ರಗಳೂ ಪ್ರಮುಖವೇ. ನೋಟು ಅಮಾನ್ಯದ ಕುರಿತಾದ ಕಥಾ ವಸ್ತುವುಳ್ಳ ಪಕ್ಕಾ ಎಂಟರ್ ಟೈನ್ ಮೆಂಟ್ ಸಿನಿಮಾ ಇದು.

ಎರಡನೆಯದಾಗಿ ಜಯರಾಮ್ ಕಾರ್ತಿಕ್ ಅಲಿಯಾಸ್ ಜೆಕೆ ಅಭಿನಯದ ಮೊದಲ ಬಾಲಿವುಡ್ ಸಿನಿಮಾ ‘ಓ ಪುಷ್ಪ ಐ ಹೇಟ್ ಟಿಯರ್ಸ್’ ಇಂದು ಬಿಡುಗಡೆಯಾಗುತ್ತಿದ್ದು ಕನ್ನಡದಲ್ಲೂ ತೆರೆ ಕಾಣುತ್ತಿದೆ.

ಮೂರನೆಯದಾಗಿ ಐತಿಹಾಸಿಕ ಸಿನಿಮಾ ಬಿಚ್ಚುಗತ್ತಿ ಕೂಡಾ ಇಂದೇ ತೆರೆ ಕಾಣುತ್ತಿದೆ. ಹರಿಪ್ರಿಯಾ, ರಾಜವರ್ಧನ್ ಭರಮಣ್ಣ ನಾಯಕಿ-ನಾಯಕರಾಗಿ ಅಭಿನಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ