ಅಮೆರಿಕಾದಲ್ಲೂ ಬಿಡುಗಡೆಯಾಗಲಿದೆ ಪುನೀತ್ ನಿರ್ಮಾಣದ ಮಾಯಾಬಜಾರ್ ಸಿನಿಮಾ

ಗುರುವಾರ, 27 ಫೆಬ್ರವರಿ 2020 (09:37 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಕನ್ನಡ ಸಿನಿಮಾಗಳು ವಿದೇಶಕ್ಕೂ ತಲುಪುತ್ತಿರುವುದು ಹೊಸದೇನಲ್ಲ. ಆ ಪಟ್ಟಿಗೆ ಪುನೀತ್ ರಾಜಕುಮಾರ್ ನಿರ್ಮಾಣದ ಮಾಯಾಬಜಾರ್ ಸಿನಿಮಾವೂ ಸೇರ್ಪಡೆಯಾಗಲಿದೆ.


ಮಾಯಾಬಜಾರ್ 2016 ಸಿನಿಮಾ ಫೆಬ್ರವರಿ 28 ರಂದು ಕರ್ನಾಟಕದಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಅಮೆರಿಕಾದಲ್ಲೂ ಬಿಡುಗಡೆಯಾಗುತ್ತಿದ್ದು ಮಾರ್ಚ್ 6 ರಿಂದ ಅಮೆರಿಕಾದಲ್ಲಿ ತೆರೆ ಕಾಣಲಿದೆ.

ವಸಿಷ್ಠ ಸಿಂಹ, ರಾಜ್ ಬಿ ಶೆಟ್ಟಿ, ಪ್ರಕಾಶ್ ರಾಜ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ಮಾಯಾಬಜಾರ್ 2016 ಸಿನಿಮಾ ಪುನೀತ್ ನಿರ್ಮಾಣ ಸಂಸ್ಥೆಯ ಎರಡನೇ ಸಿನಿಮಾವಾಗಿದೆ. ಪಕ್ಕಾ ಎಂಟರ್ ಟೈನ್ ಮೆಂಟ್ ನೀಡಲಿರುವ ಈ ಸಿನಿಮಾ ಈಗಾಗಲೇ ಕುತೂಹಲ ಕೆರಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ