ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ವಾಹನ ಸವಾರರಿಗೆ ಬೆಸ್ಕಾಂ ಕಡೆಯಿಂದ ಸಿಹಿ ಸುದ್ದಿ
ಶನಿವಾರ, 17 ನವೆಂಬರ್ 2018 (14:04 IST)
ಬೆಂಗಳೂರು : ವಾಹನ ಸವಾರರಿಗೆ ಬೆಸ್ಕಾಂ ಕಡೆಯಿಂದ ಒಂದು ಸಿಹಿ ಸುದ್ಧಿ.ಇನ್ನುಮುಂದೆ ವಾಹನ ಸವಾರರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಚಿಂತಿಸುವ ಅಗತ್ಯವಿಲ್ಲ.
ಹೌದು. ಬೆಸ್ಕಾಂ ವಾಹನ ಸವಾರರಿಗೆ ಕಡಿಮೆ ದರದಲ್ಲಿ ವಿದ್ಯುತ್ ವಾಹನಗಳಿಗೆ ಚಾರ್ಜಿಂಗ್ ಮಾಡುವ ಕೇಂದ್ರಗಳನ್ನು ಸ್ಥಾಪಿಸಿದೆ. ಸಿಎಂ ಕುಮಾರಸ್ವಾಮಿ ಅವರು ವಿಧಾನಸೌಧದಲ್ಲಿ ನೂತನ ಚಾರ್ಜಿಂಗ್ ಕೇಂದ್ರಗಳಿಗೆ ಚಾಲನೆ ನೀಡಿದ್ದಾರೆ.
ಬೈಕ್ ಮತ್ತು ಕಾರುಗಳಿಗೆ ಚಾರ್ಜಿಂಗ್ ಕೇಂದ್ರದ ಮೂಲಕ ಚಾರ್ಜ್ ಮಾಡಲು ಬೆಂಗಳೂರಿನಲ್ಲಿ 14 ಕಡೆ ಚಾರ್ಜಿಂಗ್ ಸ್ಟೇಷನ್ ಗಳ ನಿರ್ಮಾಣ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಬೆಸ್ಕಾಂ ಕೇಂದ್ರ ಕಚೇರಿ, ವಿಧಾನಸೌಧ ಹಾಗೂ ಕೆಇಆರ್ ಸಿ ಕಚೇರಿಯಲ್ಲಿ ಈ ವ್ಯವಸ್ಥೆ ಇರಲಿದೆ. ಪ್ರತಿ ಯೂನಿಟ್ ಚಾರ್ಜ್ ಗೆ 4 ರೂಪಾಯಿ 85 ಪೈಸೆ ನಿಗದಿ ಪಡಿಸಿದ್ದು, ಕಿಲೋ ವ್ಯಾಟ್ ಗೆ 50 ರೂಪಾಯಿ ಆಗಲಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ