ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಯಾಗುತ್ತಿರುವ ಇಂದಿನ ಸಿನಿಮಾ
ವಿಕ್ರಮ್ ರವಿಚಂದ್ರನ್ ಅಭಿನಯದ ತ್ರಿವಿಕ್ರಮ ಇಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಲವ್ ಎಂಟರ್ ಟೈನರ್ ಸಿನಿಮಾದಲ್ಲಿ ಆಕಾಂಕ್ಷ ಶರ್ಮಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಪ್ರತಿಭಾವಂತ ನಟ ಸುನಿಲ್ ರಾವ್ ಕಮ್ ಬ್ಯಾಕ್ ಮಾಡುತ್ತಿರುವ ಸಿನಿಮಾ ತುರ್ತು ನಿರ್ಗಮನ ಇಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ಸುಧಾರಾಣಿ, ರಾಜ್ ಬಿ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರದಲ್ಲಿದ್ದಾರೆ.
ಕಿರುತೆರೆಯಲ್ಲಿ ಮೋಡಿ ಮಾಡಿರುವ ನಟ ಕಿರಣ್ ರಾಜ್ ಸ್ಯಾಂಡಲ್ ವುಡ್ ನಲ್ಲಿ ಈ ಮೊದಲೂ ನಟಿಸಿದ್ದರು. ಇದೀಗ ಅವರ ಮತ್ತೊಂದು ಸಿನಿಮಾ ಬಿಡುಗಡೆಯಾಗುತ್ತದೆ. ಕಿರಣ್ ನಾಯಕರಾಗಿರುವ ಬಡ್ಡೀಸ್ ಕೂಡಾ ಇಂದೇ ತೆರೆ ಕಾಣುತ್ತಿದೆ.