ನಟಿ ತ್ರಿಷಾ ಕೃಷ್ಣನ್ ಗೆ ಕೊರೋನಾ ದೃಢ

ಶನಿವಾರ, 8 ಜನವರಿ 2022 (09:40 IST)
ಹೈದರಾಬಾದ್: ಬಹುಭಾಷಾ ನಟಿ ತ್ರಿಷಾ ಕೃಷ್ಣನ್ ಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಕೊರೋನಾ ಸೋಂಕಿತರ ಪಾಲಿಗೆ ಮತ್ತೊಬ್ಬ ಸಸೆಲೆಬ್ರಿಟಿ ಸೇರ್ಪಡೆಯಾಗಿದೆ.

ಕೆಲವು ದಿನಗಳ ಹಿಂದೆ ಎಲ್ಲಾ ಲಕ್ಷಣಗಳೊಂದಿಗೆ ತಮಗೆ ಕೊರೋನಾ ಸೋಂಕು ತಗುಲಿತ್ತು. ಇದೀಗ ಚೇತರಿಸಿಕೊಳ್ಳುತ್ತಿರುವುದಾಗಿ ತ್ರಿಷಾ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.

ವ್ಯಾಕ್ಸಿನೇಷನ್ ಆಗಿದ್ದರಿಂದ ನನಗೆ ಹೆಚ್ಚಿನ ಅಪಾಯವಾಗಿಲ್ಲ. ಹೀಗಾಗಿ ಎಲ್ಲರೂ ಮಾಸ್ಕ್, ಸೋಷಿಯಲ್ ಡಿಸ್ಟೇನ್ಸ್ ಜೊತೆಗೆ ಲಸಿಕೆ ಹಾಕಿಕೊಂಡು ಕೊರೋನಾದಿಂದ ಸುರಕ್ಷಿತವಾಗಿರಿ ಎಂದು ತ್ರಿಷಾ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ