ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕು ಇರಿತವಾದ ಘಟನೆಗೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಮನೆಕೆಲಸದಾಕೆ ಜೊತೆಗಿನ ಅಫೇರ್ ಈ ಎಲ್ಲಾ ಘಟನೆಗೆ ಕಾರಣ ಎಂದು ಸುದ್ದಿ ಹರಿದಾಡುತ್ತಿದೆ.
ಸೈಫ್ ಅಲಿ ಖಾನ್ ಮೇಲೆ ನಿನ್ನೆ ತಡರಾತ್ರಿ ದುಷ್ಕರ್ಮಿಗಳು ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದರು. ಮೊದಲು ಮನೆ ಕೆಲಸದವರ ಜೊತೆ ಕಳ್ಳ ದಾಳಿ ನಡೆಸಲು ಮುಂದಾಗಿದ್ದ. ಈ ವೇಳೆ ಸೈಫ್ ರಕ್ಷಿಸಲು ಹೋದಾಗ ಅವರ ಮೇಲೆ ಚಾಕುವಿನಿಂದ ಇರಿದು ದಾಳಿ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು.
ಈಗ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ದುಷ್ಕರ್ಮಿಗೆ ಮನೆ ಕೆಲಸದಾಕೆಯ ಜೊತೆ ಅಫೇರ್ ಇದ್ದಿದ್ದೇ ಈ ಎಲ್ಲಾ ಗಲಾಟೆಗೆ ಕಾರಣ ಎನ್ನಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ದಾಳಿ ಮಾಡಿದವರಲ್ಲಿ ಒಬ್ಬಾತನ ಪರಿಚಯ ಮನೆಕೆಲಸದಾಕೆಗೆ ಇತ್ತು.
ಆತ ಮನೆಗೆ ಬಂದಾಗ ಮನೆಕೆಲಸದಾಕೆ ಗಲಾಟೆ ಮಾಡಿದ್ದಾಳೆ. ಇಬ್ಬರ ನಡುವೆ ಗಲಾಟೆ ನಡೆಯುತ್ತಿದ್ದಾಗ ಸೈಫ್ ಬಿಡಿಸಲು ಹೋಗಿದ್ದಾರೆ. ಆಗ ಸೈಫ್ ಮೇಲೆಯೇ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗುತ್ತಿದೆ. ದಾಳಿ ಮಾಡಿದ ವ್ಯಕ್ತಿಯೂ ಅಪಾರ್ಟ್ ಮೆಂಟ್ ಒಳಗೆ ಇರುವ ವ್ಯಕ್ತಿಯೇ ಇರಬಹುದು ಎಂದು ಶಂಕಿಸಲಾಗಿದೆ.