ಮೋದಿ ಕಾರಣಕ್ಕೇ ಸೈಫ್ ಅಲಿ ಖಾನ್ ಗೆ ಹೀಗಾಯ್ತು: ಮೋದಿಗೂ ಸೈಫ್ ದಾಳಿಗೂ ಎತ್ತಣ ಸಂಬಂಧ

Krishnaveni K

ಗುರುವಾರ, 16 ಜನವರಿ 2025 (12:06 IST)
Photo Credit: X
ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಮುಂಬೈನ ನಿವಾಸದಲ್ಲಿ ಕಳ್ಳರು ಚಾಕುವಿನಿಂದ ಇರಿದ ಘಟನೆಗೂ ಪ್ರಧಾನಿ ಮೋದಿಗೂ ಕೆಲವರು ಸಂಬಂಧ ಕಲ್ಪಿಸಿ ಟಾಂಗ್ ಕೊಡುತ್ತಿದ್ದಾರೆ.

ಸೈಫ್ ಅಲಿ ಖಾನ್ ಇತ್ತೀಚೆಗೆ ತಮ್ಮ ಕುಟುಂಬ ಸಮೇತ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದರು. ಹೀಗಾಗಿ ಕೆಲವು ನೆಟ್ಟಿಗರು ಮೋದಿ ಹೆಸರು ಹೇಳಿಕೊಂಡು ಕುಚೋದ್ಯ ಮಾಡಿದ್ದಾರೆ. ಮೋದಿ ಭೇಟಿ ಮಾಡಿದ್ದಕ್ಕೇ ಸೈಫ್ ಗೆ ಹೀಗಾಗಿದೆ ಎಂದು ದಾಳಿಗೂ ಮೋದಿಗೂ ಇಲ್ಲದ ಸಂಬಂಧ ಕಲ್ಪಿಸಿ ಕಾಲೆಳೆಯುತ್ತಿದ್ದಾರೆ.

ಸೈಫ್ ಜೀವನದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಇತ್ತೀಚೆಗೆ ಮೋದಿಯನ್ನು ಭೇಟಿ ಮಾಡಿ ಬಂದ ಮೇಲೆ ಅವರ ಜೀವನ ಈ ಪರಿಸ್ಥಿತಿಯಾಗಿದೆ ಎಂದು ಕೆಲವರು ತಮಾಷೆ ಮಾಡಿದ್ದಾರೆ.

ಇನ್ನು, ಕೆಲವರು ಸೈಫ್ ಅಲಿ ಖಾನ್ ನಂತಹ ವಿಐಪಿಗಳ ಮನೆಗೇ ಇಷ್ಟು ಸುಲಭವಾಗಿ ಕಳ್ಳರು ನುಗ್ಗುತ್ತಾರೆ ಎಂದರೆ ಭದ್ರತೆ ಬಗ್ಗೆ ನಿಜಕ್ಕೂ ಅನುಮಾನವಾಗುತ್ತಿದೆ. ಮೋದಿ ಆಡಳಿತದಲ್ಲಿ ಭದ್ರತೆ ವೈಫಲ್ಯವಾಗಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಟಾಂಗ್ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ