ನಟಿ ಮೇಘಾ ಶೆಟ್ಟಿ ಹುಟ್ಟುಹಬ್ಬಕ್ಕೆ ಎರಡು ಸಿನಿಮಾ ತಂಡದಿಂದ ಗಿಫ್ಟ್
ಅವರ ಹುಟ್ಟುಹಬ್ಬದ ನಿಮಿತ್ತ ಕಿರುತೆರೆ ಅಭಿಮಾನಿಗಳು ವಿಶೇಷ ಸಿಡಿಪಿ ಬಿಡುಗಡೆ ಮಾಡಿ ಭರ್ಜರಿಯಾಗಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.
ಈ ನಡುವೆ ಮೇಘಾ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದು ಆ ಎರಡೂ ಸಿನಿಮಾಗಳ ಹೊಸ ಪೋಸ್ಟರ್ ಇಂದು ಬಿಡುಗಡೆಯಾಗಿದೆ.
ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿರುವ ತ್ರಿಬಲ್ ರೈಡಿಂಗ್ ಮತ್ತು ಕವೇಶ್ ಶೆಟ್ಟಿ ಅವರ ಪ್ಯಾನ್ ಇಂಡಿಯಾ ಸಿನಿಮಾ ಆಪರೇಷನ್ ಲಂಡನ್ ಸಿನಿಮಾಗೆ ಮೇಘಾ ನಾಯಕಿ. ಈ ಎರಡೂ ಸಿನಿಮಾಗಳಲ್ಲಿ ಮೇಘಾ ಲುಕ್ ಈಗ ಅನಾವರಣಗೊಂಡಿದೆ.