ಧ್ರುವ ಸರ್ಜಾ ಮಾರ್ಟಿನ್ ರಿಲೀಸ್ ದಿನಾಂಕ ಮುಂದೂಡಿಕೆ
ಈ ಮೊದಲು ಚಿತ್ರತಂಡ ಸೆಪ್ಟೆಂಬರ್ 30 ರಂದು ಬಿಡುಗಡೆ ಮಾಡುತ್ತಿರುವುದಾಗಿ ದಿನಾಂಕ ಘೋಷಿಸಿತ್ತು. ಆದರೆ ಇನ್ನೂ ಚಿತ್ರೀಕರಣವೇ ಮುಗಿದಿಲ್ಲ. ಧ್ರುವ ಸರ್ಜಾ ವೈಯಕ್ತಿಕ ಕಾರಣಗಳಿಂದಾಗಿ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆದಿಲ್ಲ.
ಹೀಗಾಗಿ ಶೂಟಿಂಗ್ ನಡೆದು ಉಳಿದ ಕೆಲಸಗಳನ್ನು ಮುಗಿಸಲು ಇನ್ನಷ್ಟು ಸಮಯ ಬೇಕು. ಹೀಗಾಗಿ ರಿಲೀಸ್ ದಿನಾಂಕ ಮುಂದೂಡುವುದು ಅನಿವಾರ್ಯವಾಗಲಿದೆ. ಸದ್ಯದಲ್ಲೇ ಹೊಸ ದಿನಾಂಕ ಪ್ರಕಟವಾಗಲಿದೆ.