ಎರಡು ಪ್ರಮುಖ ಸಿನಿಮಾಗಳು ಇಂದು ರಿಲೀಸ್

ಶುಕ್ರವಾರ, 24 ಡಿಸೆಂಬರ್ 2021 (09:03 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಶುಕ್ರವಾರದ ಸಂಭ್ರಮ. ಅದರಲ್ಲೂ ಈ ವಾರ ಕ್ರಿಸ್ ಮಸ್ ವಿಶೇಷ ಬೇರೆ. ಹೀಗಾಗಿ ಈ ವಾರ ಚಿತ್ರ ಪ್ರೇಮಿಗಳ ರಂಜಿಸಲು ಎರಡು ಭರ್ಜರಿ ಸಿನಿಮಾಗಳು ತೆರೆಗೆ ಬರುತ್ತಿವೆ.

ನಿಖಿಲ್ ಕುಮಾರಸ್ವಾಮಿ ನಾಯಕರಾಗಿರುವ ‘ರೈಡರ್’ ಸಿನಿಮಾ ಇಂದು ತೆರೆ ಕಾಣುತ್ತಿದೆ. ಈ ಸಿನಿಮಾದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿವೆ. ನಿಖಿಲ್ ಬಾಸ್ಕೆಟ್ ಬಾಲ್ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದೇ ದಿನ ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಕೂಡಾ ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ಧನಂಜಯ್ ಗೆ ನಾಯಕಿಯಾಗಿ ಅಮೃತಾ ಐಯಂಗಾರ್ ಇದ್ದರೆ, ತಾರಾ ಅನುರಾಧ-ರಂಗಾಯಣ ರಘು ಪ್ರಮುಖ ಪಾತ್ರದಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ