ಉಪೇಂದ್ರರ ಕಬ್ಜ ಸಿನಿಮಾಗೆ ಪ್ಯಾನ್ ಇಂಡಿಯಾ ಹೀರೋಯಿನ್

ಭಾನುವಾರ, 10 ಅಕ್ಟೋಬರ್ 2021 (09:25 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಶೂಟಿಂಗ್ ಭರದಿಂದ ಸಾಗಿದೆ.


ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಸೇರಿದಂತೆ ಭಾರೀ ತಾರಾಗಣವಿದೆ ಎನ್ನುವುದು ತಿಳಿದುಬಂದಿದೆ. ಒಟ್ಟು ಐದು ಭಾಷೆಗಳಲ್ಲಿ ಚಿತ್ರ ಮೂಡಿಬರುತ್ತಿದೆ. ಆದರೆ ಚಿತ್ರದ ನಾಯಕಿ ಯಾರು ಎಂಬ ಪ್ರಶ್ನೆಗೆ ಇದುವರೆಗೆ ಉತ್ತರ ಸಿಕ್ಕಿಲ್ಲ.

ಇದೀಗ ಚಿತ್ರ ನಿರ್ದೇಶಕ ಆರ್. ಚಂದ್ರು ಸಿನಿಮಾ ಹೀರೋಯಿನ್ ಯಾರು ಎಂಬ ಪ್ರಶ್ನೆಗೆ ಸುಳಿವು ನೀಡಿದ್ದಾರೆ. ಸಿನಿಮಾಗೆ ಪ್ಯಾನ್ ಇಂಡಿಯಾ ಹೀರೋಯಿನ್ ಬರುತ್ತಾರೆ. ನಮ್ಮ ತಲೆಯಲ್ಲಿ ಸದ್ಯಕ್ಕೆ ಒಂದಿಬ್ಬರ ಹೆಸರಿದೆ. ಆದರೆ ಯಾರು ಎಂಬುದನ್ನು ಸದ್ಯದಲ್ಲೇ ಬಹಿರಂಗಪಡಿಸಲಿದ್ದೇವೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ