ಕಬ್ಜ ಬಿಡುಗಡೆಗೆ ಮುನ್ನ ತಿರುಪತಿ ತಿಮ್ಮಪ್ಪನ ಮೊರೆ ಹೋದ ಉಪೇಂದ್ರ

ಗುರುವಾರ, 16 ಮಾರ್ಚ್ 2023 (17:56 IST)
Photo Courtesy: Twitter
ಬೆಂಗಳೂರು: ಬಹುನಿರೀಕ್ಷಿತ ಕಬ್ಜ ಸಿನಿಮಾ ನಾಳೆ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಬಿಡುಗಡೆಗೆ ಮುನ್ನ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಚಿತ್ರತಂಡ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ತೆರಳಿದ್ದಾರೆ.

ಉಪೇಂದ್ರ, ನಿರ್ದೇಶಕ ಆರ್.ಚಂದ್ರು ಸೇರಿದಂತೆ ಚಿತ್ರತಂಡ ಖಾಸಗಿ ವಿಮಾನದ ಮೂಲಕ ತಿರುಪತಿಗೆ ಭೇಟಿ ನೀಡಿದ್ದು, ಸಿನಿಮಾ ಯಶಸ್ವೀ ಪ್ರದರ್ಶನಗೊಳ್ಳುವಂತೆ ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿದ್ದಾರೆ.

ನಾಳೆ ಸುಮಾರು 4000 ಕ್ಕೂ ಸ್ಕ್ರೀನ್ ಗಳಲ್ಲಿ ಕಬ್ಜ ಬಿಡುಗಡೆಯಾಗಲಿದೆ. ಕೆಜಿಎಫ್, ಕಾಂತಾರ ನಂತರ ಈ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹಿಟ್ ತಂದುಕೊಡುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ