ರಿಯಲ್ ಸ್ಟಾರ್ ಉಪ್ಪಿ ಪುತ್ರಿ ಐಶ್ವರ್ಯಾ ಮಾಡಿದ ಕೆಲಸವೇನು ಗೊತ್ತೇ?!

ಬುಧವಾರ, 10 ಜನವರಿ 2018 (08:54 IST)
ಬೆಂಗಳೂರು: ರಿಯಲ್  ಸ್ಟಾರ್ ಉಪೇಂದ್ರ ಎಲ್ಲಾ ವಿಷಯದಲ್ಲೂ ಡಿಫರೆಂಟ್. ಇದೀಗ  ಅವರ ಪುತ್ರಿಯೂ ಅಪ್ಪನಿಗಿಂತ ತಾನೇನೂ ಕಮ್ಮಿಯಿಲ್ಲ ಎಂದು ನಿರೂಪಿಸಿದ್ದಾಳೆ.
 

ಪುಟಾಣಿ ಐಶ್ವರ್ಯಾ ಈಗಾಗಲೇ ಅಮ್ಮನ ಜತೆ ಒಂದು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದು ನಿಮಗೆಲ್ಲಾ ಗೊತ್ತೇ ಇದೆ. ಇದೀಗ ಈ ಸ್ಟಾರ್ ದಂಪತಿ ಪುತ್ರಿ ಸಾಮಾಜಿಕ ಜಾಲತಾಣ ಟ್ವಿಟರ್ ಗೆ ಎಂಟ್ರಿ ಕೊಟ್ಟಿದ್ದಾಳೆ!

ಇಷ್ಟು ಚಿಕ್ಕ ವಯಸ್ಸಿಗೇ ಟ್ವಿಟರ್ ಗೆ ಎಂಟ್ರಿ ಕೊಟ್ಟು ಐಶ್ವರ್ಯಾ ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ. ಟ್ವಿಟರ್ ಲೋಕಕ್ಕೆ ಕಾಲಿಟ್ಟ ಗಳಿಗೆಯಲ್ಲೇ ಡಬ್ ಮ್ಯಾಶ್ ವಿಡಿಯೋವೊಂದನ್ನು ಹಾಕಿ ಸುದ್ದಿ ಮಾಡಿದ್ದಾಳೆ. ಈಗಾಗಲೇ  ಆಕೆಗೆ 79 ಫಾಲೋವರ್ಸ್ ಇದ್ದಾರೆ! ಎಷ್ಟಾದರೂ ಸ್ಟಾರ್ ನಟನ ಪುತ್ರಿಯಲ್ಲವೇ? ಎಲ್ಲವೂ ಡಿಫರೆಂಟಾಗಿಯೇ ಇರುತ್ತೆ ಬಿಡಿ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ