ನನಗೆ ಯಾರೂ ದೇಣಿಗೆ ಕೊಡಬೇಡಿ: ಉಪೇಂದ್ರ ಮನವಿ
ಇದಕ್ಕೆ ಕಾರಣವನ್ನೂ ನೀಡಿದ್ದಾರೆ. ಇನ್ನು ಮುಂದೆ ತಮಗೆ ಯಾರಿಗಾದರೂ ಸಹಾಯ ಮಾಡಬೇಕೆಂದಿದ್ದರೆ ನೇರವಾಗಿ ನೀವೇ ಮಾಡಿ. ನಮ್ಮ ಫೌಂಡೇಷನ್ ಗೆ ದೇಣಿಗೆ ಕೊಡಬೇಡಿ. ಯಾವುದೇ ಹಣ, ಕೊಡುಗೆಗಳನ್ನು ಸ್ವೀಕರಿಸುವುದನ್ನು ನಾವು ನಿಲ್ಲಿಸುತ್ತಿದ್ದೇವೆ. ಇದುವರೆಗೆ ಉಪ್ಪಿ ಫೌಂಡೇಷನ್ ಗೆ ಹರಿದುಬಂದ ಹಣ, ಖರ್ಚಿನ ವಿವರಗಳನ್ನು ಸದ್ಯದಲ್ಲೇ ಬಹಿರಂಗಪಡಿಸುತ್ತೇನೆ ಎಂದು ಉಪೇಂದ್ರ ಹೇಳಿದ್ದಾರೆ.