ರಿಯಲ್ ಸ್ಟಾರ್ ಉಪೇಂದ್ರ ಕೈಯಲ್ಲಿದೆ ಸಾಲು ಸಾಲು ಸಿನಿಮಾಗಳು
ಆ ಪೈಕಿ ಆರ್ ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಕೂಡಾ ಒಂದು. ಇದಲ್ಲದೆ, ಉಪೇಂದ್ರ ಮತ್ತೆ ಬಾ, ಕನ್ನೇಶ್ವರ, ಉಪ್ಪಿ ರುಪೀ, ಲಗಾಮು, ಬುದ್ಧಿವಂತ 2 ಹೀಗೆ ಲಿಸ್ಟ್ ಬೆಳೆಯುತ್ತಲೇ ಇದೆ. 2019 ರಲ್ಲಿ ಐ ಲವ್ ಯೂ ಸಿನಿಮಾ ಬಳಿಕ ಉಪೇಂದ್ರರ ಯಾವುದೇ ಸಿನಿಮಾಗಳೂ ಬಿಡುಗಡೆಯಾಗಿಲ್ಲ. ಹೀಗಾಗಿ ಮುಂದಿನ ವರ್ಷ ಉಪೇಂದ್ರ ನಟನೆಯ ಸಿನಿಮಾ ರಿಲೀಸ್ ಜೊತೆಗೆ ನಿರ್ದೇಶನದ ಸಿನಿಮಾವೂ ಘೋಷಣೆಯಾಗುವ ಸಾಧ್ಯತೆಯಿದೆ.